ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: 8 ವರ್ಷ ಕಳೆದರೂ ಪೂರ್ಣಗೊಳ್ಳದ ಹೆದ್ದಾರಿ ಕಾಮಗಾರಿ: ಸ್ವಪಕ್ಷದ ಶಾಸಕರಿಂದಲೇ ಐಆರ್‌ಬಿ ವಿರುದ್ಧ ಕಿಡಿ

ಕಾರವಾರ (ಉತ್ತರಕನ್ನಡ): ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಆರಂಭವಾಗಿ 8 ವರ್ಷಗಳೇ ಕಳೆದರೂ ಇದುವರೆಗೂ ಪೂರ್ಣಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಅದರಲ್ಲೂ ಜಿಲ್ಲಾಕೇಂದ್ರ ಕಾರವಾರದ ವ್ಯಾಪ್ತಿಯಲ್ಲೇ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೆದ್ದಾರಿ ಪೂರ್ಣಗೊಳ್ಳದಿರೋದು ಒಂದೆಡೆಯಾದ್ರೆ, ಅಪೂರ್ಣಗೊಂಡ ಹೆದ್ದಾರಿ ಸೃಷ್ಟಿಸುತ್ತಿರುವ ಅವಾಂತರಗಳು, ಆಗುತ್ತಿರುವ ಅವಘಡಗಳು ಇನ್ನೊಂದೆಡೆ. ಹೀಗಾಗಿ ಇದೀಗ ಜನಪ್ರತಿನಿಧಿಗಳು ಸಹ ಹೆದ್ದಾರಿ ಅಗಲೀಕರಣ ಕೈಗೊಂಡಿರುವ ಐಆರ್‌ಬಿ ಕಂಪೆನಿ ನಿರ್ಲಕ್ಷ್ಯದ ವಿರುದ್ಧ ಕೆಂಡಾಮಂಡಲರಾಗುವಂತಾಗಿದೆ.

ಇನ್ನು ಜಿಲ್ಲಾ ಪೊಲೀಸ್ ಇಲಾಖೆ ಹೆದ್ದಾರಿ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಿರುವ ಕುರಿತು ಸಮೀಕ್ಷೆಯನ್ನ ನಡೆಸಿದ್ದು, ಸುಮಾರು 70 ಬ್ಲ್ಯಾಕ್ ಸ್ಪಾಟ್‌ಗಳನ್ನ ಗುರುತಿಸಿದೆ. ಇದು ಹೆದ್ದಾರಿಯಲ್ಲಿನ ನ್ಯೂನ್ಯತೆಗಳನ್ನ ಎತ್ತಿ ತೋರಿಸುವಂತಿದ್ದು, ಈ ನಿಟ್ಟಿನಲ್ಲಿ ತಿಂಗಳೊಳಗೆ ಈ ಸಮಸ್ಯೆಯನ್ನ ಪರಿಹರಿಸುವಂತೆ ಗಡುವು ನೀಡಲಾಗಿದೆ ಎನ್ನುತ್ತಾರೆ ಎಸ್ಪಿ ಸುಮನ ಪೆನ್ನೇಕರ್.

ಸಿಎಂ ಬಸವರಾಜ್ ಬೊಮ್ಮಾಯಿಯವ್ರು ಕೂಡ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆ ಕಂಪನಿಯವರೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ರೂ, ಈವರೆಗೆ ಸಭೆ ನಡೆಸಿಲ್ಲ. ಇದು ಕೂಡ ಸರ್ಕಾರ ಹೆದ್ದಾರಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದೆಯಾ ಎಂಬ ಅನುಮಾನ ಕೂಡ ಕಾಡಲಾರಂಭಿಸಿದೆ.

ಒಟ್ಟಿನಲ್ಲಿ ಐಆರ್ ಬಿ ಕಂಪನಿ ಹೆದ್ದಾರಿ ಕಾಮಗಾರಿಯನ್ನ ಶೀಘ್ರ ಪೂರ್ಣಗೊಳಿಸಲು ಮುಂದಾಗಬೇಕಾಗಿದೆ. ಆ ಮೂಲಕ ಅರ್ಧಂಬರ್ಧ ಹೆದ್ದಾರಿ ಕಾಮಗಾರಿಯಿಂದ ಉಂಟಾಗುತ್ತಿರುವ ಅವಘಡಗಳನ್ನ ತಪ್ಪಿಸಿ, ಉತ್ತರಕನ್ನಡಿಗರ ಜೀವ ಉಳಿಸಬೇಕಿದೆ.

Edited By : Manjunath H D
PublicNext

PublicNext

16/09/2022 02:23 pm

Cinque Terre

25.1 K

Cinque Terre

0

ಸಂಬಂಧಿತ ಸುದ್ದಿ