ಕಾರವಾರ: ಉಡವನ್ನೇ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಬೇಟೆಯಾಡಿ ನುಂಗಲೆತ್ನಿರುವ ವಿಚಿತ್ರ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಯಾಣ ಕ್ರಾಸ್ ಬಳಿ ನಡೆದಿದೆ.
ಕಾಳಿಂಗ ಸರ್ಪ ಉಡವನ್ನು ನುಂಗುತ್ತಿರುವ ವಿಡಿಯೋ ಬೈಕ್ ಸವಾರನ ಮೊಬೈಲ್ ನಲ್ಲಿ ಸೆರೆಯಾಗಿದೆ. ಅನಂತಮೂರ್ತಿ ಮತ್ತಿಘಟ್ಟ ಎಂಬುವ ಬೈಕ್ ಸವಾರ ಈ ದೃಶ್ಯವನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ವಿಡಿಯೋದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬೃಹತ್ ಗಾತ್ರದ ಕಾಳಿಂಗ ಸರ್ಪ ಉಡವನ್ನು ನುಂಗಲು ಯತ್ನಿಸಿದೆ. ಆದರೆ, ಸರ್ಪ ಶತಪ್ರಯತ್ನ ನಡೆಸಿದರೂ ಉಡವನ್ನು ನುಂಗಲಾರದೆ ಬಳಿಕ ಕಾಳಿಂಗ ಸೋಲನ್ನೊಪ್ಪಿಕೊಂಡಿರುವುದು ವಿಡಿಯೋದಲ್ಲಿದೆ. ಉಡದ ಗಾತ್ರ ದೊಡ್ಡದಿದ್ದರಿಂದ ಹಾಗೂ ಕಲ್ಲು ಬಂಡೆಗೆ ಉಡದ ಬಾಲ ಸಿಲುಕಿದ್ದರಿಂದ ಕಾಳಿಂಗಕ್ಕೆ ನುಂಗಲಾಗಿರಲಿಲ್ಲ. ಉಡವನ್ನು ನುಂಗಲಾಗದೇ ಅರ್ಧ ನುಂಗಿದ ಉಡವನ್ನು ಕಾಳಿಂಗ ವಾಪಸ್ ಹೊರಹಾಕಿ ನಡೆದಿದೆ.
PublicNext
12/09/2022 07:40 am