ಕಾರವಾರ: ನಗರದ ಬೈತಖೋಲ್ ಬಂದರಿನ ಬಳಿ ಕಾಣಿಸಿಕೊಂಡಿದ್ದ 11 ಅಡಿ ಉದ್ದದ ಕಾಳಿಂಗಸರ್ಪವನ್ನು ಉರಗ ಪ್ರೇಮಿ ಮುರಾದ್ ಖಾನ್ ಅವರು ರಕ್ಷಣೆ ಮಾಡಿದ್ದಾರೆ.
ಬೈತಖೋಲ್ ಬಂದರಿನ ಎದುರು ಇರುವ ಗ್ಯಾರೇಜ್ ಬಳಿ ಕಾಳಿಂಗ ಸರ್ಪವೊಂದು ಕಾಣಿಸಿದೆ. ಹೆದ್ದಾರಿ ಪಕ್ಕದ ಗ್ಯಾರೇಜ್, ಚಹಾ ಅಂಗಡಿ ಸೇರಿದಂತೆ ಜನಸಂದಣಿ ಇರುವ ಪ್ರದೇಶವಾಗಿದ್ದರಿಂದ ಆತಂಕದಲ್ಲಿ ಸ್ಥಳೀಯರು ಮುರಾದ್ ಗೆ ಕರೆ ಮಾಡಿದ್ದಾರೆ.
ಮುರಾದ್ ಅವರು ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸಿದ್ದಾರೆ. ಸರ್ಪವು 11 ಅಡಿ ಉದ್ದವಿದ್ದು, 4 ವರ್ಷ ವಯಸ್ಸಿನದ್ದಿರಬಹುದು ಎಂದು ತಿಳಿಸಿದ್ದಾರೆ.
PublicNext
19/09/2022 07:20 pm