ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪರಿಹಾರ ನೀಡದ ಸರ್ಕಾರ:ಕಚೇರಿಯ ಪೀಠೋಪಕರಣಗಳನ್ನೇ ಜಪ್ತಿ ಮಾಡಿದ ಕೋರ್ಟ್!

ಕಾರವಾರ (ಉತ್ತರಕನ್ನಡ): ಕಾರವಾರದ ಸೀಬರ್ಡ್ ನೌಕಾನೆಲೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಮಾಲೀಕರಿಗೆ ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಅಸಿಸ್ಟೆಂಟ್ ಕಮಿಷನರ್ ಕಚೇರಿಯ ಪೀಠೋಪಕರಣಗಳನ್ನೆ ಕೋರ್ಟ್ ಜಪ್ತಿಪಡಿಸಿಕೊಂಡಿದೆ!

ಕಾರವಾರದ ಅರಗಾದಲ್ಲಿನ ಶೀಲಾ ದಂಡೇಕರ್ ಎನ್ನುವವರ ಒಂದು ಎಕರೆ ಕೃಷಿ ಜಮೀನನ್ನ ಸೀಬರ್ಡ್ ಯೋಜನೆಗಾಗಿ 1986ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅಂದು 21 ಲಕ್ಷ ಪರಿಹಾರವನ್ನ ಸೀಬರ್ಡ್ ವಿಶೇಷ ಭೂಸ್ವಾಧೀನಾಧಿಕಾರಿಗಳು ಪಾವತಿಸಿದ್ದರೂ ಸಹ ಅದರಲ್ಲಿ ಟಿಡಿಎಸ್ ಕಡಿತ ಮಾಡಿಕೊಂಡಿದ್ದಕ್ಕಾಗಿ ಕಾರವಾರದ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಅದರಂತೆ ಹೆಚ್ಚುವರಿ ಪರಿಹಾರ 10.66 ಲಕ್ಷ ರೂ.ಗಳನ್ನ ಪಾವತಿಸಲು ಕೋರ್ಟ್ ಆದೇಶವಿದ್ದರೂ ಈವರೆಗೆ ಮಾಲೀಕರಿಗೆ ಪಾವತಿಯಾಗಿರಲಿಲ್ಲ. ಹೀಗಾಗಿ ಪರಿಹಾರ ಪಾವತಿಗೆ ವಿಳಂಬ ಮಾಡುತ್ತಿರುವುದಕ್ಕೆ ಕೋರ್ಟ್ ಭೂಸ್ವಾಧೀನಾಧಿಕಾರಿಯಾಗಿರುವ ಅಸಿಸ್ಟೆಂಟ್ ಕಮಿಷನರ್ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಕಾರು ಸೇರಿದಂತೆ ಪೀಠೋಪಕರಣಗಳನ್ನ ಜಪ್ತಿ ಮಾಡಿಕೊಳ್ಳಲು ಆದೇಶಿಸಿದ್ದು, ಅದರಂತೆ ಕೋರ್ಟ್ ಸಿಬ್ಬಂದಿ ಪೀಠೋಪಕರಣಗಳನ್ನ ಕೋರ್ಟ್ ಗೆ ಕೊಂಡೊಯ್ದಿದ್ದಾರೆ.

ಇನ್ನು, ಭೂಸ್ವಾಧೀನ ಮಾಡಿಕೊಳ್ಳುವ ವೇಳೆಗೆ ಸುಮಾರು 50 ವರ್ಷದವರಿದ್ದ ಜಾಗದ ಮಾಲಕಿ ಈಗ ಸುಮಾರು 80 ವರ್ಷದ ವೃದ್ಧೆಯಾಗಿದ್ದಾರೆ. ಕೊನೆಗಾಲದಲ್ಲೂ ಪರಿಹಾರ ನೀಡದೆ ಸತಾಯಿಸುತ್ತಿರುವ ಸರ್ಕಾರದ ಕ್ರಮದಿಂದಾಗಿ ಬೇಸರಿಸಿಕೊಂಡಿರುವ ಅವರು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶೀಘ್ರ ಪರಿಹಾರ ಬಿಡುಗಡೆಗಾಗಿ ಕೋರಿದ್ದರು. ಸದ್ಯ ಮಾಲಕಿಗೆ ಓಡಾಡಲಾಗದ ಕಾರಣ ಅವರ ಪುತ್ರ ಪ್ರದೀಪ್ ಸಮ್ಮುಖದಲ್ಲಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಪೀಠೋಪಕರಣ ಜಪ್ತಿಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿಕೊಂಡು ಅಧಿಕಾರಿಗಳಿಗೆ ತೊಂದರೆ ನೀಡಬೇಕೆಂಬ ಉದ್ದೇಶ ನಮ್ಮದಲ್ಲ. ಆದರೆ ಪರಿಹಾರ ಬಿಡುಗಡೆಗೆ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ಮನವಿ ಮಾಡುತ್ತಾರೆ ಅವರು.

Edited By : Manjunath H D
PublicNext

PublicNext

30/09/2022 06:57 pm

Cinque Terre

40.8 K

Cinque Terre

0

ಸಂಬಂಧಿತ ಸುದ್ದಿ