ಕಾರವಾರ : ನಾಲ್ವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರೊಂದು ಪಲ್ಟಿಯಾಗಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಭಟ್ಕಳ ತಾಲೂಕಿನ ಮೂಡಭಟ್ಕಳ ಬೈಪಾಸ್ ಬಳಿ ನಡೆದಿದೆ.
ಕಾರು ಚಾಲಕನಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ, ರಂಗಿನಕಟ್ಟೆಯ ಉನೈಜ್ ಹಮ್ಜದ್ ಖತೀಬ್ (20) ಮೃತ ಯುವಕ. ಈತ ತನ್ನ ಮೂವರು ಎಂಜಿನಿಯರಿಂಗ್ ಸಹಪಾಠಿಗಳೊಂದಿಗೆ ಕಾರಿನಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬಂದು ರಸ್ತೆಯ ಬಲ ಭಾಗಕ್ಕೆ ಹೋಗಿ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರು ಪಲ್ಟಿಯಾಗಿದೆ.
ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಎರಡು ಚಕ್ರಗಳು ನೂರು ಮೀಟರ್ ದೂರಕ್ಕೆ ಹೋಗಿಬಿದ್ದಿದೆ. ಅಲ್ಲದೇ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು ಹಾರಿ ರಸ್ತೆಯ ಫಲಕವೊಂದಕ್ಕೆ ಡಿಕ್ಕಿಯಾದ ಪರಿಣಾಮ ಫಲಕ ಕೂಡ ನೆಲಕ್ಕುರುಳಿದೆ.
ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
24/09/2022 11:58 am