ಕಾರವಾರ (ಉತ್ತರಕನ್ನಡ): ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಗಳ 2.11 ಕೋಟಿ ರೂ. ನಗದನ್ನು ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಶನಿವಾರ ರಾತ್ರಿ ನಿಪ್ಪಾಣಿಯಿಂದ ಕೇರಳ ಕಡೆಗೆ ಈರ್ವರು ಚಿನ್ನದ ವ್ಯಾಪಾರಿಗಳು ಕಾರಿನಲ್ಲಿ ಹೊರಟಿದ್ದರು. ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ದಾಟುತ್ತಿದ್ದಂತೆ ಎರಡು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಏಳೆಂಟು ಮಂದಿ, ವ್ಯಾಪಾರಿಗಳ ಕಾರನ್ನ ಅಡ್ಡಗಟ್ಟಿ, ಹಲ್ಲೆ ನಡೆಸಿ ನಗದು ದೋಚಿ ಪರಾರಿಯಾಗಿದ್ದಾರೆ.
ಘಟನೆ ಶನಿವಾರ ನಡೆದಿದ್ದರೂ, ದಾಖಲೆಗಳನ್ನೆಲ್ಲ ಹೊಂದಾಣಿಸಿಕೊಂಡು ಬರಲು ವಿಳಂಬವಾದ ಕಾರಣ ದರೋಡೆಗೆ ಒಳಗಾದ ವ್ಯಾಪಾರಿಗಳು ನಿನ್ನೆ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದಾಗ ರಸ್ತೆಯಲ್ಲಿ ಕಾರಿನ ಗ್ಲಾಸಿನ ಚೂರುಗಳೆಲ್ಲ ಪೊಲೀಸರಿಗೆ ದೊರೆತಿವೆ. ಆದರೆ ದರೋಡೆ ಮಾಡಿದವರು ಯಾರು ಎಂಬುದನ್ನ ಇನ್ನು ಪತ್ತೆ ಹಚ್ಚಬೇಕಾಗಿದ್ದು, ತನಿಖೆ ಮುಂದುವರಿದಿದೆ.
PublicNext
05/10/2022 02:23 pm