ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಅಕ್ರಮ ಪಟಾಕಿ ತಯಾರಿಸುತ್ತಿದ್ದ ಮೂರು ಮನೆಗಳ ಮೇಲೆ ಪೊಲೀಸ್ ದಾಳಿ!!

ಕಾರವಾರ (ಉತ್ತರಕನ್ನಡ): ಅನಧಿಕೃತವಾಗಿ ಪಟಾಕಿ ತಯಾರಿಸುತ್ತಿದ್ದ ಹೊನ್ನಾವರ ತಾಲೂಕಿನ ಕರ್ಕಿ ಸಮೀಪದ ಮೂರು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ, ಮಾನವ ಪ್ರಾಣಕ್ಕೆ ಅಪಾಯಾವಾಗುವಂತೆ ಮನೆಯಲ್ಲಿಯೇ ಪಟಾಕಿ ತಯಾರಿಸುತ್ತಿದ್ದ ಆರೋಪದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಮೂರೂ‌ ಮನೆಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದಲ್ಲಿ ಮಾರಾಟ ಮಾಡಲು ಪಟಾಕಿ ತಯಾರಿಕೆಗೆ ಬಳಸುವ ಗಂಧಕದ ಪುಡಿ, ಸುರುಳಿ ಸುತ್ತುವ ಕಾಗದ, ತಯಾರಿಸಿದ ಗರ್ನಾಲ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು.

ದಾಳಿ ವೇಳೆ ಪಟಾಕಿಗೆ ಬಳಸುವ ಸಾಮಗ್ರಿಗಳನ್ನು, ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕರ್ಕಿ ನಡುಚಿಟ್ಟೆಯ ನಿವಾಸಿಗಳಾದ ಖಾಸೀಮ್ ಹುಸೇನ್ ಸಾಬ್, ಇಸ್ಮಾಯಿಲ್ ಯೂಸುಫ್ ಸಾಬ್, ಹೆಗಡೆಹಿತ್ಲದ ನಿವಾಸಿ ಅಮೀನಾಬಿ ಹಸನ್ ಸಾಬ್ ಎನ್ನುವವರ ಮೇಲೆ ಹೊನ್ನಾವರ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.

Edited By : Nagaraj Tulugeri
PublicNext

PublicNext

26/09/2022 06:50 pm

Cinque Terre

16.01 K

Cinque Terre

0

ಸಂಬಂಧಿತ ಸುದ್ದಿ