ಕಾರ್ಕಳ: ಉಡುಪಿ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜ್ ಉಪ್ಪುಂದ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಗಳಿಸಿ ಚಿಕ್ಕಮಂಗಳೂರಿನಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ 8ನೇ ತರಗತಿಯ ಸುಧೀಕ್ಷಾ, ಶ್ರಾವ್ಯ, ವರ್ಣ, ತೃಪ್ತಿ, 7ನೇ ತರಗತಿಯ ರಾಫಿಯಾ ಬಾನು, ಸಾಂಚಿರಾವ್, ಝುಭೇದ, ವಿಲ್ಫಾ, 6ನೇ ತರಗತಿಯ ಶೈನಿ ಡಿಸೋಜಾ, ಸಾಧಿಯಾ ಮೆಹೆರ್, ಶಗುನ್ ವರ್ಮ ಅನ್ನಿ ಹಾಗೂ ಉತ್ತಮ ಅಟ್ಯಾಕರ್ ಪ್ರಶಸ್ತಿಯನ್ನು ಶೈನಿ ಸಂತೋಷ್ ಡಿಸೋಜಾ ಮತ್ತು ಉತ್ತಮ ಅಲ್‌ರೌಂಡರ್ ಪ್ರಶಸ್ತಿಯನ್ನು ಶ್ರಾವ್ಯಪಡೆದುಕೊಂಡರು.
Kshetra Samachara
16/09/2022 06:26 pm