ಬೈಂದೂರು: ಇನ್ಮುಂದೆ ಗ್ರಾಮ ಪಂಚಾಯತಿ ಅಧ್ಯಕ್ಷರು ಯಾವುದೇ ಹಣಕಾಸು ವ್ಯವಹಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಂತಿಲ್ಲ.
ಅಂದರೆ ಪಂಚಾಯ್ತಿಯ ಹಣಕಾಸು ವ್ಯವಹಾರದ ಯಾವ ಚೆಕ್‌ಗಳಿಗೂ ಇವರು ಸಹಿ ಹಾಕುವಂತಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮನೆ, ವಾಣಿಜ್ಯ ಕಟ್ಟಡ ಕಾಮಗಾರಿಗಳು, ಕೈಗಾರಿಕೆ, ಗಣಿಗಾರಿಕೆ, ಅಂಗಡಿ ಮತ್ತಿತರ ವಾಣಿಜ್ಯ ವಹಿವಾಟುಗಳ ಆರಂಭಕ್ಕೆ ಪರವಾನಗಿ, ಇ-ಸ್ವತ್ತು ಅಂದರೆ ನಮೂನೆ-9, 11ಎ, 11ಬಿ ನೀಡುವ ಅಧಿಕಾರವನ್ನು ಪಿಡಿಒ ಮಾತ್ರ ನಿರ್ವಹಿಸಬೇಕು. ಇದರಲ್ಲಿ ಗ್ರಾ.ಪಂ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಮೂಗು ತೂರಿಸುವಂತಿಲ್ಲ.
ಹೌದು, ರಾಜ್ಯದ ಬಹುತೇಕ ಗ್ರಾಮ ಪಂಚಾಯ್ತಿಗಳು ಇಂದು ಒಂದಿಲ್ಲೊಂದು ಹಗರಣದ ಗೂಡಾಗಿವೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಇಲ್ಲಿ ನಿತ್ಯ ನೂತನ ಎಂಬಂತಾಗಿದ್ದು, ಅನೇಕ ಅಭಿವೃದ್ಧಿ ಯೋಜನೆಗಳು ತಳದಲ್ಲಿಯೇ ಸೋರಿಕೆಯಾಗುತ್ತಿವೆ.
ಈ ಸೋರಿಕೆಯನ್ನು ತಡೆದು ಹಣಕಾಸು ವ್ಯವಹಾರವನ್ನು ಸುಭದ್ರಗೊಳಿಸುವ ಹಿನ್ನಲೆಯಲ್ಲಿ ರೂಪಿಸಲಾದ ನಡಾವಳಿಗಳನ್ನು ಜಾರಿಗೊಳಿಸಲು ಸರಕಾರ ಆದೇಶ ಹೊರಡಿಸಿದೆ
Kshetra Samachara
08/10/2022 11:44 am