ಕಾರ್ಕಳ: ನಗರದ ಮೂರು ಮಾರ್ಗದಿಂದ ಆನೆಕೆರೆ ಮಸೀದಿಯ ವರೆಗಿನ ರಸ್ತೆಯು ನಾದುರಸ್ಥಿಯಿಂದಾಗಿ ಭಾರೀ ಗಾತ್ರದ ಹೊಂಡಗಳು ಕಾಣಿಸಿಕೊಂಡು ಪಾದಚಾರಿಗಳಿಗೆ ನಡೆದಾಡುವುದಕ್ಕೂ ಕಷ್ಟಕರವಾಗಿದ್ದು, ವಾಹನ ಓಡಾಟಕ್ಕೆ ಅಡಚಣೆಯಾಗುತ್ತಿದೆ ಎಂದು ಆರೋಪಿಸಿ ಕಾರ್ಕಳ ವಾಹನ ಚಾಲಕರು ಹಾಗೂ ವ್ಯಾಪಾರಸ್ಥರು ಕೆಳ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮೂರುಮಾರ್ಗದಿಂದ ಆನೆಕೆರೆ ವರೆಗಿನ ರಸ್ತೆಯಲ್ಲಿ ವಾಹನ ಓಡಾಟ ನಡೆಸುವುದರಿಂದ ವಾಹನದ ಬಿಡಿಭಾಗಗಳು ಕೆಟ್ಟುಹೋಗಿ ತುಂಬಲಾರದಷ್ಟು ನಷ್ಟ ಸಂಭವಿಸುತ್ತಿದೆ. ಸದ್ರಿ ರಸ್ತೆಯ ಕುರಿತು ಗಮಹ ಹರಿಸುವ ನಿಟ್ಟಿನಲ್ಲಿ ಪುರಸಭಾ ಆಡಳಿತ ವರ್ಗದವರು ಸ್ಥಳ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಪುರಸಭಾ ಆಡಳಿತ ವರ್ಗವು ನಿರ್ಲಕ್ಷö್ಯ ಧೋರಣೆಯನ್ನು ಮುಂದುವರಿಸಿದಲ್ಲಿ ತೀವ್ರ ಹೋರಾಟಕ್ಕೂ ಸಿದ್ಧ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Kshetra Samachara
12/09/2022 07:24 pm