ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು:ಕುಂದಾಪುರ ನೂತನ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶ ಕ್ರಾಂತಿವೀರ ಶಿವಪ್ಪ ಅವರಿಗೆ ಸ್ವಾಗತ

ಬೈಂದೂರು: ಕುಂದಾಪುರ ನೂತನ ಪ್ರದಾನ ಜಿಲ್ಲಾ & ಸತ್ರ ನ್ಯಾಯಧೀಶ ಶ್ರೀ ಶಾಂತವೀರ್ ಶಿವಪ್ಪ ಇವರನ್ನು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿದರು.

ಬೈಂದೂರು: ಕುಂದಾಪುರ ಬಾರ್ ಅಸೋಸಿಯೇಷನ್ (ರಿ.), ಕುಂದಾಪುರ ವತಿಯಿಂದ ಜೂನ್ 10 ರಂದು ಶುಕ್ರವಾರ ವಕೀಲರ ಸಭಾ ಭವನ, ವಕೀಲರ ಸಂಘ (ರಿ.) ಕುಂದಾಪುರದ ಗೌರವಾನ್ವಿತ ನೂತನ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶ ಶ್ರೀ ಶಾಂತವೀರ್ ಶಿವಪ್ಪ ಇವರನ್ನು ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆ ಆತ್ಮೀಯವಾಗಿ ಸ್ವಾಗತಿಸಿಕೊಂಡರು.

ಕುಂದಾಪುರದ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಧೀಶರಾದ ಶ್ರೀ ಅಬ್ದುಲ್ ರಹೀಮ್ ಹುಸೇನ್ ಶೇಖ್, ಉಡುಪಿಯ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶರ್ಮಿಳಾ, ಕುಂದಾಪುರದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರಾಜು ಎನ್, ಗೌರವಾನ್ವಿತ ಸಿವಿಲ್ & ಜೆ. ಎಮ್.ಎಫ್. ಸಿ. ನ್ಯಾಯಾಧೀಶರಾದ ಶ್ರೀಮತಿ ರೋಹಿಣಿ ಡಿ, ಹಾಗೂ ಗೌರವಾನ್ವಿತ 2ನೇ ಹೆಚ್ಚುವರಿ ಸಿವಿಲ್ & ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಕು. ವಿದ್ಯಾ ಎ.ಎಸ್.ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ಗೌರವಾನ್ವಿತ ಹಿರಿಯ ಕಿರಿಯ ಮಹಿಳಾ ವಕೀಲರುಗಳು ಹಾಜರಿದ್ದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ವಂದಿಸಿದರು ವಕೀಲರಾದ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

11/06/2022 09:45 am

Cinque Terre

724

Cinque Terre

0

ಸಂಬಂಧಿತ ಸುದ್ದಿ