ಉಡುಪಿ: ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ, ಉಡುಪಿ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ,ಮಂಗಳೂರು ವಿ ವಿ ಶೈಕ್ಷಣಿಕ ಸಮಿತಿ ಸದಸ್ಯ , ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ ಇತ್ಯಾದಿ ಹುದ್ದೆಗಳನ್ನು ಈ ಹಿಂದೆ ಅಲಂಕರಿಸಿದ್ದ ಅಮೃತ್ ಶೆಣೈ , ಇದೀಗ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಾರ್ ರೂಮ್ ನ ಸದಸ್ಯನಾಗಿ ಉಡುಪಿ ಜಿಲ್ಲಾ ಕೋ ಆರ್ಡಿನಟರ್ ಆಗಿ ರಾಜ್ಯ ಡಿ ಕೆ ಶಿವಕುಮಾರ್ ನೇಮಕ ಮಾಡಿದ್ದಾರೆ.
ಯಾವುದೇ ನಿರ್ದಿಷ್ಟ ಹುದ್ದೆ, ಜವಾಬ್ದಾರಿ ಇಲ್ಲದಿದ್ದರೂ ಕಾಂಗ್ರೆಸ್ ಪರ ನಿಷ್ಠೆ ಯಿಂದ ಕೆಲಸ ಮಾಡುತ್ತಿದ್ದ ತನಗೆ ಇಂದಿನಿಂದ ನಿರ್ಧಿಷ್ಟವಾದ ಜವಾಬ್ದಾರಿಗಳು ಸಿಕ್ಕಿದ್ದು ಸಂತೋಷ ಆಗಿದೆ ಎಂದು ಅವರು ತಿಳಿಸಿದ್ದಾರೆ.
Kshetra Samachara
26/09/2022 02:10 pm