ಕೋಟ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಕೃತ್ಯ ಖಂಡಿಸಿ ಕೋಟ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ ರಾಜೀನಾಮೆ ಘೋಷಿಸಿದ್ದಾರೆ.
ಇವರು ಸಚಿವ ಶ್ರೀನಿವಾಸ ಪೂಜಾರಿಯವರ ಕ್ಷೇತ್ರದವರು ಎಂಬುದು ಗಮನಾರ್ಹ ಸಂಗತಿ. ಯುವ ಸಂಘಟಕ, ಕೋಟ ಯುವಮೊರ್ಚಾ ಅಧ್ಯಕ್ಷ ಕೊಲೆ ವಿಚಾರದಲ್ಲಿ ಮನನೊಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾರೆ. ಪಕ್ಷ ಹಾಗೂ ಸಂಘಟನೆಗಾಗಿ ಕೆಲಸ ಮಾಡುತ್ತಿರುವರನ್ನು ಕೊಲೆಯಾಗುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ.
ರಾಜ್ಯ ಸರ್ಕಾರ ಕಠಿಣ ಕ್ರಮ ಎಂಬ ಪೊಳ್ಳು ಭರವಸೆ ನೀಡಿ ಆರೋಪಿಗಳನ್ನು ಬಂಧಿಸಿದಂತೆ ಮಾಡಿ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ.ಇಂದು ಪ್ರವೀಣ್...ನಾಳೆ ಮತ್ತೊಬ್ಬರು ಎನ್ನುವಂತಾಗಿದೆ. ನಿರಂತರವಾಗಿ ನೋವು ಅನುಭವಿಸುತ್ತಿದ್ದೇವೆ.ಅದಕ್ಕಾಗಿ ಈ ರಾಜಿನಾಮೆ ತೀರ್ಮಾನ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
27/07/2022 05:20 pm