ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾರಾಯಣ ಗುರುಗಳ ಪಠ್ಯ ಕೈ ಬಿಟ್ಟಿರುವುದು ಬಿಜೆಪಿಯದ್ದು ವಿನಾಶಕಾಲೆ ವಿಪರೀತ ಬುದ್ದಿ:ಯುವ ಕಾಂಗ್ರೆಸ್

ಉಡುಪಿ: ದೀಪ ಆರುವ ಮುಂಚೆ ಜೋರಾಗಿ ಉರಿಯುವ ರೀತಿ ಬಿಜೆಪಿ ಪರಿಸ್ಥಿತಿಯಾಗಿದೆ. ನಾರಾಯಣ ಗುರುಗಳ ಪಠ್ಯ ವನ್ನು ಕೈ ಬಿಟ್ಟಿರುವುದು ಬಿಜೆಪಿಯದ್ದು ವಿನಾಶಕಾಲೆ ವಿಪರೀತ ಬುದ್ದಿ ಎಂದು ತೋರಿಸುತ್ತದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್‌ ಕೋಟ್ಯಾನ್‌ ಅವರು ಹೇಳಿದ್ದಾರೆ.

ದೇಶದಲ್ಲಿ ತೀವ್ರವಾದ ಅಸ್ಪೃಶ್ಯತೆ , ಶೋಷಣೆ ಇದ್ದ ಸಮಯದಲ್ಲಿ ಪೆರಿಯಾರ್ ಹಾಗೂ ನಾರಾಯಣ ಗುರುಗಳಂತವರು ಕ್ರಾಂತಿ ಮಾಡಿದ್ದರು. ಆ ಸಮಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಶೋಷಣೆಗೆ ಒಳಗಾಗಿದ್ದ ಬಿಲ್ಲವ ಸಮಾಜವನ್ನು ಮುಖ್ಯವಾಗಿಸಿಕೊಂಡು ಅಸ್ಪೃಶ್ಯ ತೆಯಿಂದ ನೊಂದಿದ್ದ ಇತರ ಸಮುದಾಯಕ್ಕೂ ದಾರಿ ದೀಪವಾದವರು. ಆದ್ದರಿಂದ ಅವರ ಬಗೆಗಿನ ಪಠ್ಯ ಪುಸ್ತಕ ಕೈ ಬಿಡುವುದು ಬಿಜೆಪಿ ಡೋಂಗಿ ಎಂದು ತೋರಿಸುತ್ತದೆ ಎಂದರು.

ಅಂದು ನಾರಾಯಣ ಗುರುಗಳ ಟ್ಯಾಬ್ಲೋ ಧಿಕ್ಕರಿಸಿದವರು ಇಂದು ಪಠ್ಯ ಕೈಬಿಟ್ಟಿದ್ದಾರೆ ಎಂದ ಅವರು, ಬಿಲ್ಲವರ ಬಗ್ಗೆ ಬರೇ ಭಾಷಣ ಮಾಡಿ ಹೋಟೆಲ್ ಕೇಳಿದ ಕೆಲವು ಕಾರ್ಕಳ ದ ಬಿಲ್ಲವ ನಾಯಕರು ಹಾಗೂ ಬಿಜೆಪಿಯ ಬಿಲ್ಲವ ಮುಖಂಡರು ಈಗ ಮಾತನಾಡಲಿ ಎಂದು ಸವಾಲು ಹಾಕಿದರು.

ಶಿವಮೊಗ್ಗ ದ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು ಸೂಚಿಸುವ ಇವರ ಮಂತ್ರಿ ಮಂಡಲದ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳು ಮತ್ತು ಮಂಗಳೂರು ವಿಮಾನ ನಿಲ್ದಾಣ ಕ್ಕೆ ಕೋಟಿ ಚೆನ್ನಯ್ಯ ಹೆಸರಿಡಲು ಕೇಳಲು ಮಾತು ಬರುವುದಿಲ್ಲವೇ ಎಂದು ಕೇಳಬೆಕಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಹಿಂದುಳಿದ ವರ್ಗದವರನ್ನು ಮುಗಿಸುವ ಹಾಗೂ ಮೇಲ್ವರ್ಗದವರನ್ನು ಜೀವಂತ ಇಡುವ ಉದ್ದೇಶದಿಂದ ಅವರು ಈ ರೀತಿಯಲ್ಲಿ ಬಿಜೆಪಿ ವರ್ತಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

24/05/2022 08:42 pm

Cinque Terre

1.34 K

Cinque Terre

1

ಸಂಬಂಧಿತ ಸುದ್ದಿ