ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಲೆವೂರು ಗ್ರಾ.ಪಂ ಚುನಾವಣೆ: ಬಿಜೆಪಿ ಬೆಂಬಲಿತ ಗೆಲುವು

ಉಡುಪಿ: ಅಲೆವೂರು ಪಂಚಾಯಿತಿಯ ಕೊರಂಗ್ರಪಾಡಿ ವಾರ್ಡ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಂಕರ್‌ ಪಾಲನ್ 67 ಮತಗಳಿಂದ ಜಯಗಳಿಸಿದ್ದಾರೆ. ಪ್ರವೀಣ್ ಶೆಟ್ಟಿ ನಿಧನದಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಉಪಚುನಾವಣೆ ನಡೆದಿತ್ತು. ಪ್ರವೀಣ್ ಶೆಟ್ಟಿ ಸಹೋದರ ಪ್ರಸಾದ್ ಶೆಟ್ಟಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದರು. ಕಳೆದ ಬಾರಿ ಐದು ಮತಗಳ ಅಂತರದಲ್ಲಿ ಸೋತಿದ್ದ ಶಂಕರ್‌ ಪಾಲನ್ ಈ ಬಾರಿ ಗೆಲುವು ಸಾಧಿಸಿದ್ದಾರೆ. ಉಡುಪಿ ತಾಲೂಕು ಕಚೇರಿಯಲ್ಲಿಮತ ಎಣಿಕೆ ನಡೆಯಿತು. ಶಂಕರ್ ಪಾಲನ್ 400 ಹಾಗೂ ಪ್ರಸಾದ್ ಶೆಟ್ಟಿ 333 ಮತ ಪಡೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

23/05/2022 12:50 pm

Cinque Terre

1.87 K

Cinque Terre

0

ಸಂಬಂಧಿತ ಸುದ್ದಿ