ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಪೋಷಣಾ ಅಭಿಯಾನ

ಕುಂದಾಪುರ :ಮಹಿಳಾ ಮೋರ್ಚಾದ ನೇತ್ರತ್ವದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ ಇವರ ನಿವಾಸದಲ್ಲಿ ಆಯೋಜಿಸಲಾಯಿತು.

ಗೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಆಶಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಶೋಭಾ ವೈಲೆಟ್ ಬರೆಟ್ಟೋ, ಹಾಗೂ ಶ್ಯಾಮಲಾರವರನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮವನ್ನ ಉದ್ದೇಶಿಸಿ ಮಂಡಲದ ಕ್ಷೇತ್ರಧ್ಯಕ್ಷರಾದ ಶಂಕರ್ ಅಂಕದಕಟ್ಟೆ ಅವರು ಮಾತನಾಡಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದ ಪೋಷಣಾ ಅಭಿಯಾನದಲ್ಲಿ ಇವತ್ತಿನ ಅಮೂಲ್ಯವಾದ ದಿವಸ ಎಂದರೂ ಕೂಡ ತಪ್ಪಾಗಲಾರದು, ದೇಶಕ್ಕೆ ಮಾರಕರೋಗ ಬಂದಾಗ ಆಶಾ ಕಾರ್ಯಕರ್ತರ ಸೇವೆ ನೆನಪಿಸಿಕೊಳ್ಳಬೇಕಾಗಿದ್ದು, ಜೀವದ ಹಂಗನ್ನು ತೊರೆದು ಪ್ರತಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯದ ಕಡೆ ಗಮನ ಕೊಡಿ ಎಂದು, ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನೆ ಮನೆಗೆ ಸಾರ್ವಜನಿಕರಿಗೆ ಮಾರಕ ರೋಗದ ಬಗ್ಗೆ ಅರಿವು ಮೂಡಿಸಿದ್ದು ಶ್ಲಾಘನೀಯ ಎಂದರು. ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪ ಪೈ ಪ್ರಸ್ತಾವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿಯ ಕ್ಷೇತ್ರ ಅಧ್ಯಕ್ಷರಾದ, ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪ ಪೈ, ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ಶ್ರೀಧರ್, ಸೌರಬಿ. ಪೈ, ಮಂಡಲದ ಕಾರ್ಯದರ್ಶಿ ಸುರೇಂದ್ರ ಸಂಗಮ್, ಆಶಾಲತಾ ನಾಯಕ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರು, ಬೀಜಾಡಿ ಮಹಾಶಕ್ತಿ ಕೇಂದ್ರದ ಪ್ರಭಾರಿ ಸುಧೀರ್ ಕೆ.ಎಸ್. ಬೀಜಾಡಿ ಜಿಲ್ಲಾ ಪಂಚಾಯಿತಿನ ನಿಕಟಪೂರ್ವ ಸದಸ್ಯೆ ಲತಾ ಸುರೇಶ್ ಶೆಟ್ಟಿ , ಗೋಪಾಡಿ ಪಂಚಾಯಿತಿನ ಸದಸ್ಯೆ ನೇತ್ರಾವತಿ ಮಡಿವಾಳ, ಸಾವಿತ್ರಿ, ಮಹಿಳಾ ಮೋರ್ಚಾ ದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/04/2022 02:31 pm

Cinque Terre

2.02 K

Cinque Terre

0

ಸಂಬಂಧಿತ ಸುದ್ದಿ