ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವರಿಷ್ಠರ ಸೂಚನೆ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕಿಣಿ ರಾಜೀನಾಮೆ

ಉಡುಪಿ: ಪಕ್ಷದ ನಾಯಕರ ಸೂಚನೆಯಂತೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕಿಣಿ ರಾಜೀನಾಮೆ ನೀಡಿದ್ದಾರೆ.ಕಳೆದ ಒಂದೂವರೆ ವರ್ಷದಿಂದ ಕಿಣಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. "ಪ್ರಾಧಿಕಾರದ ಮೂರು ವರ್ಷದ ಅವಧಿಯಲ್ಲಿ ಒಂದೂವರೆ ವರ್ಷದ ಮಟ್ಟಿಗೆ ಪಕ್ಷವು ನನಗೆ ಈ ಜವಾಬ್ದಾರಿ ನೀಡಿತ್ತು.ನಾನು ಪಕ್ಷ ಮತ್ತು ಸಂಘದ ಶಿಸ್ತಿನ ಸಿಪಾಯಿ. ಪಕ್ಷದ ಸೂಚನೆಯಂತೆ ಅಧಿಕಾರ ಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡುತ್ತಿದ್ದೇನೆ.

ನನ್ನ ಅವಧಿಯಲ್ಲಿ ಪ್ತಾಧಿಕಾರಕ್ಕೆ ಕಾಯಕಲ್ಪ ನೀಡಿದ ಖುಷಿ ಇದೆ.ಮುಖ್ಯವಾಗಿ ಅಂಬಾಗಿಲು ,ಪೆರಂಪಳ್ಳಿ ,ಮಣಿಪಾಲ ಚತುಷ್ಫತ ಕಾಮಗಾರಿಗೆ ವೇಗ ನೀಡಿ ಕಾಲಮಿತಿಯಲ್ಲಿ ಕಾಮಗಾರಿ ನಡೆಸಿದ ಬಗ್ಗೆ ಖುಷಿ ಇದೆ.ಜೊತೆಗೆ ಜಮೀನು ನೀಡಿದವರಿಗೆ ನೇರ ಪರಿಹಾರ ಹಣ ನೀಡದೆ ಟಿಡಿಆರ್ ಮೂಲಕ ಪರಿಹಾರ ನೀಡುವ ಮೂಲಕ ಜಾಗ ಬಿಟ್ಟುಕೊಟ್ಟವರಿಗೆ ಹೆಚ್ಚಿನ ಲಾಭ ಆಗುವಂತೆ ಮಾಡಿದ್ದೇನೆ ಎಂದು ರಾಘವೇಂದ್ರ ಕಿಣಿ ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

29/12/2021 05:05 pm

Cinque Terre

2.34 K

Cinque Terre

0

ಸಂಬಂಧಿತ ಸುದ್ದಿ