ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಬಜೆಟ್ ಜನಪರ ಹೊರತು ಜನಪ್ರಿಯ ಅಲ್ಲ: ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ,ರಾಜಕೀಯ ವಿಶ್ಲೇಷಕ

ಉಡುಪಿ: ಕೇಂದ್ರ ಬಜೆಟ್ ಜನಪರ ಹೊರತು ಜನಪ್ರಿಯ ಬಜೆಟ್ ಅಲ್ಲ :ಈ ಬಾರಿಯ ಬಜೆಟ್ ನ್ನು ಹಿಂದಿನ ಬಜೆಟ್ ನ ಹಾಗೆ ವಿಶ್ಲೇಷಣೆ ಮಾಡುವುದು ಸರಿಯಲ್ಲ.ಯಾಕೆಂದರೆ ಇದು ಕೊರೊನೊತ್ತರ ಬಜೆಟ್ .ಆಥಿ೯ಕವಾಗಿ ಸಾಕಷ್ಟು ಸೊರಗಿರುವ ಸಂದಭ೯ದಲ್ಲಿ ತೆರಿಗೆ ವಿನಾಯಿತಿ ನೀಡುವುದು ಸುಲಭವಲ್ಲ.ಮುಂದಿನ ಅಭಿವೃದ್ಧಿಗೆ ಹಣವನ್ನು ಸಂಗ್ರಹಿಸಬೇಕಾದ ಅಗತ್ಯತೆಯೂ ಇದೆ.ಉದ್ಯೋಗ ಸೃಷ್ಟಿ ಮಾಡ ಬೇಕಾದ ಅನಿವಾರ್ಯತೆಯೂ ಇದೆ.

ಜನರಿಗೆ ಇನ್ನಷ್ಟು ಹೊರೆಯೂ ಆಗದ ರೀತಿಯಲ್ಲಿ ತೆರಿಗೆ ಹಾಕುವ ಚಾಕಚಕ್ಯತೆಯನ್ನು ಕೇಂದ್ರ ಬಜೆಟ್ ನಲ್ಲಿ ಸ್ವಷ್ಟವಾಗಿ ಕಾಣುತ್ತದೆ.

ಕೃಷಿ ಯನ್ನುಪ್ರಧಾನವಾಗಿ ಇಟ್ಟುಕೊಂಡು "ಕೃಷಿ ಸೆಸ್"ಹಾಕಿರುವುದರ ಕುರಿತು ಜನರಿಗೆ ಮನವರಿಕೆ ಮಾಡಬೇಕಾದ ಅನಿವಾರ್ಯತೆ ಸರಕಾರಕ್ಕೂ ಇದೆ.ಕೃಷಿ ಸೆಸ್ ಕೇವಲ ಆಮದು ಆಧರಿಸಿದ ವಸ್ತು ಗಳಿಗೆ ಮಾತ್ರ .ಹೊರಗಿನಿಂದದ ಬರುವ ವಸ್ತುಗಳಿಗೆ ಹಾಕುವ ಕಸ್ಟಮ್ ಡ್ಯೂಟಿಯ ಮೇಲಿನ ತೆರಿಗೆಯ ಮೇಲೆ ಹಾಕುವ ಎಕ್ಸಟ್ರಾ ತೆರಿಗೆ ಇದು.ಹಾಗಾಗಿ ಹೆಚ್ಚು ವ್ಯತ್ಯಾಸ ಬರುವುದಿಲ್ಲ .ಇದರಿಂದಾಗಿ ದೇಶಿಯ ಉತ್ಪಾದನೆಗೆ ಹೆಚ್ಚು ಸಹಕಾರಿಯಾಗ ಬಹುದು ಅನ್ನುವ ಅಭಿಪ್ರಾಯ ಆಥಿ೯ಕ ತಜ್ಞರ ಮಾತು.

ಆದರೂ ಪೆಟ್ರೋಲಿಯಂ ವಸ್ತುಗಳ ಬೆಲೆ ಇನ್ನಷ್ಟು ಮೇಲೆ ಹೇೂಗದ ಹಾಗೆ ನೇೂಡಿಕೊಳ್ಳ ಬೇಕಾಗಿದೆ.ಇದರಿಂದಾಗಿ ಜನ ಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ;ಮಾತ್ರವಲ್ಲ ಜನ ಸಾಮಾನ್ಯರು ಬಜೆಟ್ ನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯೂ ಇದೆ.ಏನೇ ಆಗಲಿ ಇದೊಂದು ಸಂಕಷ್ಟ ಕಾಲದ ಬಜೆಟ್ . ಜನರ ಸಹಕಾರ, ಸಹನೆ ತೀರ ಅನಿವಾರ್ಯ.

Edited By : Nirmala Aralikatti
Kshetra Samachara

Kshetra Samachara

01/02/2021 08:02 pm

Cinque Terre

3.3 K

Cinque Terre

1

ಸಂಬಂಧಿತ ಸುದ್ದಿ