ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಳ್ಳೆಕ್ಯಾತರ ಸಮಸ್ಯೆ ಆಲಿಸಿದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಲುಗದ್ದೆ

ಸಾಗರ : ಕಳೆದ ಹಲವು ವರ್ಷಗಳಿಂದಲೂ ಸೂರಿಗಾಗಿ ಪರದಾಡುತ್ತಿರುವ ಶಿಳ್ಳೇಕ್ಯಾತ ಜನಾಂಗದವರ ಸಮಸ್ಯೆಯನ್ನು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಲುಗದ್ದೆ ಅವರು ಆಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗೌತಮಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಡ್ಯಾಮ್ ಹೊಸೂರು ಪ್ರದೇಶಕ್ಕೆ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಲುಗದ್ದೆ ಅವರು ಭೇಟಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ವಾಸವಾಗಿದ್ದ 13 ಶಿಳ್ಳೆಕ್ಯಾತ ಕುಟುಂಬದವರು, ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿವೆ. ಹಲವು ವರ್ಷಗಳಿಂದಲೂ ಇವರಿಗೆ ಮನೆ ನಿರ್ಮಿಸಲು ಜಾಗ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರು.

ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಕಲ್ಲುಗದ್ದೆ ಅವರು ಶಿಳ್ಳೆಕ್ಯಾತ ಕುಟುಂಬಗಳ ಸಮಸ್ಯೆಯನ್ನು ಅರಿತು, ಗೌತಮಪುರ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಾಣಿಶ್ರೀ ಅವರೊಂದಿಗೆ ಮಾತನಾಡಿದ್ದಾರೆ.

ಈ ವೇಳೆಯಲ್ಲಿ ವಾಣಿಶ್ರೀ ಅವರು ಶಿಳ್ಳೆಕ್ಯಾತ ಕುಟುಂಬಗಳಿಂದ ಅರ್ಜಿಯನ್ನು ಪಡೆದು ಸರಕಾರದಿಂದ ಸಿಗುವ ಜಾಗವನ್ನು ಮಂಜೂರು ಮಾಡಿಸಿಕೊಡುವ ಭರವಸೆಯನ್ನು ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

03/01/2021 03:58 pm

Cinque Terre

3.87 K

Cinque Terre

1

ಸಂಬಂಧಿತ ಸುದ್ದಿ