ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಾಂತಿಯ ತೋಟ ಆಗಿರುವ ಕರ್ನಾಟಕ ಮುಂದೆಯೂ ಶಾಂತಿಯಿಂದ ಇರಬೇಕು: ಡಾ.ಪ್ರಣವಾನಂದ ಸ್ವಾಮೀಜಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪ್ರತ್ಯೇಕ ನಿಗಮ ಮಂಡಳಿ ಘೋಷಣೆ ಮಾಡಿ, 500ಕೋಟಿ ರೂ. ಅನುದಾನ ಮೀಸಲು ಇಡಬೇಕು. ಸಮುದಾಯದ ಕುಲಕಸುಬು ಶೇಂದಿ ಇಳಿಸಲು ರಾಜ್ಯಾಂದ್ಯಂತ ಸರಕಾರ ಅನುಮತಿ ನೀಡಬೇಕು. ಈ ವಿಚಾರದಲ್ಲಿ ಸಮುದಾಯಕ್ಕೆ ನ್ಯಾಯ ಸಿಗದಿದ್ದರೆ ಮುಂಬರುವ ಚುನಾವಣೆಯಲ್ಲಿ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ಅಧ್ಯಕ್ಷ ಮತ್ತು ಶ್ರೀ ಶರಣಬಸವೇಶ್ವರ ಮಠಾಧಿಪತಿ ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಶ್ರೀಗಳು , ಪ್ರತಿಯೊಬ್ಬ ಬಿಲ್ಲವ, ಪೂಜಾರಿ ಈಡಿಗರ ಮನೆಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಹೇಳಿದ ಪೂಜಾ ವಿಧಿವಿಧಾನಗಳು ನಡೆಯಬೇಕೆ ಹೊರತು ಬೇರೆಯವರು ಹೇಳಿದ ವಿಧಾನಗಳಲ್ಲ. ಅದ್ವೈತವನ್ನು ನಾರಾಯಣಗುರುಗಳು ಜೀವನದಲ್ಲಿ ಅಳವಡಿಸಿ ತೋರಿಸಿಕೊಟ್ಟಿದ್ದಾರೆ. ಕೆಲವರು ಅದ್ವೈತ ಹೇಳಿದರೂ ಅವರಲ್ಲಿ ಯಾವುದೇ ಅದ್ವೈತ ಕಂಡುಬಂದಿಲ್ಲ ಎಂದು ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಶಾಂತಿಯ ತೋಟ ಆಗಿರುವ ಕರ್ನಾಟಕ ಮುಂದೆಯೂ ಶಾಂತಿಯಿಂದ ಇರಬೇಕು. ಧರ್ಮಧರ್ಮಗಳ ಮಧ್ಯೆ ಯಾವತ್ತೂ ಘರ್ಷಣೆ ನಡೆಯಬಾರದು. ಯಾವುದೇ ವಿಚಾರವನ್ನು ಇನ್ನೊಂದು ಧರ್ಮಗಳ ಮೇಲೆ ಹೇರಬಾರದು. ಧರ್ಮಧರ್ಮಗಳ ಮಧ್ಯೆ ಹೊಂದಾಣಿಕೆ ಬರಬೇಕು. ಯುವ ಜನತೆ ಶಿಕ್ಷಣ ವ್ಯಾಪಾರಕ್ಕೆ ಹೆಚ್ಚು ಒತ್ತುಕೊಡಬೇಕು. ಯಾವುದೇ ಪಕ್ಷದಲ್ಲಿರುವ ಯುವ ಜನತೆ ಇನ್ನೊಂದು ಜನಾಂಗಕ್ಕೆ ನೋವು ಕೊಡುವ ಕೆಲಸ ಮಾಡಬಾರದು ಎಂದು ಅವರು ಮನವಿ ಮಾಡಿದರು.

Edited By :
Kshetra Samachara

Kshetra Samachara

04/04/2022 12:00 pm

Cinque Terre

4.26 K

Cinque Terre

1

ಸಂಬಂಧಿತ ಸುದ್ದಿ