ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮನೆ ಕಳೆದುಕೊಂಡ ಕುಟುಂಬದವರಿಗೆ ಶಾಸಕರಿಂದ ಪರಿಹಾರ ವಿತರಣೆ

ಉಡುಪಿ: ಭಾರೀ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಅನೇಕ ಕಡೆ ಪ್ರವಾಹ ಉಂಟಾಗಿದ್ದು, ಸಾಕಷ್ಟು ಆಸ್ತಿ ಪಾಸ್ತಿ ನಷ್ಟಗೊಂಡಿದೆ. ಇದೀಗ ಮನೆ ಕಳೆದುಕೊಂಡವರಿಗೆ ಸರಕಾರದ ಕಡೆಯಿಂದ ಪರಿಹಾರ ನೀಡುವ ಪ್ರಕ್ರಿಯೆ ಚುರುಕುಗೊಂಡಿದೆ.

ಉಡುಪಿ ಮತ್ತು ಸುತ್ತಮುತ್ತಲಿನ ಅನೇಕ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಅಂತಹ 3 ಕುಟುಂಬಗಳಿಗೆ ತಲಾ 2,85,300 ರೂ.ಗಳ ಚೆಕ್ ಅನ್ನು ಪ್ರವಾಹ ಪರಿಹಾರ ನಿಧಿಯಿಂದ ಶಾಸಕ ರಘುಪತಿ ಭಟ್ ಹಸ್ತಾಂತರಿಸಿದರು.

ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

22/09/2020 08:27 pm

Cinque Terre

9.11 K

Cinque Terre

0

ಸಂಬಂಧಿತ ಸುದ್ದಿ