ಉಡುಪಿ: ಬಿಜೆಪಿಯ ಯಾವುದೇ ಕಾರ್ಯಕರ್ತ ಸಂಕಷ್ಟದಲ್ಲಿದ್ದಾಗ ಪರಸ್ಪರ ಸಹಾಯಹಸ್ತ ಚಾಚುವುದರಿಂದ ಕಾರ್ಯಕರ್ತರ ಮನೋಸ್ಥೆರ್ಯ ವೃದ್ಧಿಯಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಕಾಪು ವಿಧಾನಸಭೆ ಕ್ಷೇತ್ರದ ಬೊಮ್ಮಾರಬೆಟ್ಟು ಗ್ರಾಮದ ಹಿರಿಯಡ್ಕದಲ್ಲಿ ನಡೆದ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
‘ವಸುಧೈವ ಕುಟುಂಬಕಂ’ ತತ್ವದಲ್ಲಿ ನಂಬಿಕೆ ಇರಿಸಿರುವ ಬಿಜೆಪಿ ಸ್ವತ: ಒಂದು ಕುಟುಂಬವಿದ್ದಂತೆ. ಪ್ರತಿ ಕಾರ್ಯಕರ್ತನೂ ಒಂದೇ ಕುಟುಂಬದ ಸದಸ್ಯನಿದ್ದಂತೆ. ಕುಟುಂಬದ ಸರ್ವ ಸದಸ್ಯರ ಯೋಗಕ್ಷೇಮ ಕುಟುಂಬದಲ್ಲಿ ಆರೋಗ್ಯಕರ ವಾತಾವರಣ ಮೂಡಿಸುತ್ತದೆ.
ರಾಜ್ಯ ಬಿಜೆಪಿ ಸೂಚನೆಯಂತೆ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಕುಟುಂಬದ ಸದಸ್ಯರೊಂದಿಗೆ ಒಗ್ಗೂಡಿ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಕುಟುಂಬ ಮಿಲನ ಕಾರ್ಯಕರ್ತರೊಳಗಿನ ಸುಮಧುರ ಬಾಂಧವ್ಯ ಇನ್ನಷ್ಟು ಸದೃಢಗೊಳಿಸುವ ಜೊತೆಗೆ ಸಂಘಟನೆಗೂ ಒತ್ತು ನೀಡಲಿದೆ ಎಂದರು.
Kshetra Samachara
18/11/2020 05:43 pm