ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕೃಷಿ ಭೂಮಿಗೆ ಹೊಂದಿಕೊಂಡ ಜಾಗದಲ್ಲಿ ಅಕ್ರಮ ಗಣಿಗಾರಿಕೆ; ಸ್ಥಳೀಯರ ವಿರೋಧ

ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರೋದನ್ನ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಗೋಳಿಕಟ್ಟೆ ನರ್ಕುಳಿ ಎಂಬಲ್ಲಿ ನಡೆದಿದೆ.

ಆಲೂರು ಗೋಳಿಕಟ್ಟೆ, ನರ್ಕುಳಿ, ಪಾರಿ, ಸಸಿಹಿತ್ಲು, ಪಡುವನ ಮನೆ, ಪಾರಿ ಮನೆ, ಸಾಲಿಬೆರಡಿ, ಸೇರಿದಂತೆ 50ಕ್ಕೂ ಹೆಚ್ಚು ವಿಸ್ತಾರವಾದ ಕೃಷಿ ಭೂಮಿಗೆ ಕೃಷಿ ಸಾಮಾಗ್ರಿಗಳನ್ನು ಸಾಗಿಸಲು ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ.

ಇಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕೆಲವು ದಿನಗಳಿಂದ ಯಾರ ಭಯವಿಲ್ಲದೇ ಕಲ್ಲು ಕಡಿಯುವ ಗಣಿಗಾರಿಕೆ ನಡೆಸುತ್ತಿರೋದ್ರಿಂದ ಬೃಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗಿವೆ. ಇದ್ರಿಂದ ಜನ-ಜಾನುವಾರುಗಳಿಗೆ ತೊಂದರೆ ಆಗಲಿದೆ. ಹಾಗೂ ಕೃಷಿ ಭೂಮಿಗೆ ಸಂಪರ್ಕಿಸುವ ರಸ್ತೆ ಕಡಿತಗೊಳ್ಳಲಿದೆ. ಹೀಗಾಗಿ ಗಣಿಕಾರಿಕೆ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿ ಕುಂದಾಪುರ ತಹಶೀಲ್ದಾರ್ ಕಿರಣ್ ಬೋರಯ್ಯ ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.

Edited By :
Kshetra Samachara

Kshetra Samachara

03/06/2022 03:24 pm

Cinque Terre

4.16 K

Cinque Terre

0

ಸಂಬಂಧಿತ ಸುದ್ದಿ