ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಒಳಚರಂಡಿ ನಿರ್ಮಾಣ ಕಾಮಗಾರಿಯ ವೆಟ್‌ವೆಲ್ ರಚನೆಗೆ ಅಗತ್ಯವಿರುವ 26 ಸೆಂಟ್ಸ್ ಭೂಮಿಯನ್ನು ಐದು ಪಟ್ಟು ದರ ನೀಡಿ ಪುರಸಭೆ ಪಡೆದುಕೊಂಡಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ.ಈ ಕುರಿತು ಲೋಕಾಯುಕ್ತ ತನಿಖೆಯಾಗಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷೆ ಸದಸ್ಯೆ ಪಿ. ದೇವಕಿ ಸಣ್ಣಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪುರಸಭೆಯ ವ್ಯಾಪ್ತಿಯಲ್ಲಿ ಎರಡು ಸರ್ವೇ ನಂಬರ್ ಗಳಲ್ಲಿ 13 ಹಾಗೂ 12 ಸೆಂಟ್ಸ್‌ನಂತೆ ಒಟ್ಟು 36 ಸೆಂಟ್ಸ್ ಗುರುತಿಸಲಾಗಿದ್ದು ಇದರಲ್ಲಿ 26 ಸೆಂಟ್ಸ್ ಜಾಗವನ್ನು ಕಲ್ಪನಾ ನಾಗರಾಜ್ ಅವರಿಂದ 95 ಲಕ್ಷ ರೂ.ಗಳಿಗೆ ಖರೀದಿಸಲಾಗಿದೆ. ಇದು ಮೇಲ್ನೋಟಕ್ಕೆ ಅಕ್ರಮ ವ್ಯವಹಾರವಾಗಿದೆ ಎಂದು ಕಂಡುಬರುತ್ತದೆ. ಈ ವರ್ಷದ ಫೆಬ್ರವರಿ ಹಾಗೂ ಎಪ್ರಿಲ್‌ನಲ್ಲಿ ದಾಖಲೆ ಸಿದ್ಧಪಡಿಸಿ ಖರೀದಿ ವ್ಯವಹಾರ ನಡೆದಿದ್ದು ಪುರಸಭೆಯ ಸದಸ್ಯರ ಗಮನಕ್ಕೆ ತಾರದೆ ಅಧಿಕಾರಿಗಳೇ ವ್ಯವಹಾರ ನಡೆಸಿರುವುದು ಸಂಶಯಕ್ಕೆ ಕಾರಣವಾಗಿದೆ.ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
Kshetra Samachara
31/07/2021 10:54 am