ಉಡುಪಿ:ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಗೆ ಮತ್ತೆ ಬೆದರಿಕೆ ಹಾಕಲಾಗಿದೆ. ಮಾರಿಗುಡಿ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಮತ್ತೆ ಬೆದರಿಕೆ ಹಾಕಲಾಗಿದ್ದು, ಶ್ರದ್ಧಾಂಜಲಿ ಬ್ಯಾನರ್ ಬೇಗ ತಯಾರು ಮಾಡಿಡು,ಮತ್ತೆ ಹುಟ್ಟಿ ಬರಬೇಡ ಎಂದು ಬೆದರಿಕೆ ಸಂದೇಶ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಭದ್ರತೆ ಪಡೆಯುವಂತೆ ಸೂಚನೆ ನೀಡಿದೆ.
ಯಶ್ ಪಾಲ್ ಸುವರ್ಣ ,ಹಿಜಾಬ್ ವಿವಾದದ ವೇಳೆಮುಂಚೂಣಿಯಲ್ಲಿದ್ದರು.ಮಾತ್ರವಲ್ಲ ,ಮಳಲಿ ಮಸೀದಿ ಕುರಿತು ಹೇಳಿಕೆಯನ್ನೂ ನೀಡಿದ್ದರು.
ಬೆಸರಿಕೆ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಯಶ್ ಪಾಲ್ ಸುವರ್ಣ ಅಭಿಮಾನಿಗಳು ಈಗಾಗಲೇ ಎಸ್ಪಿ ಗೆ ಮನವಿ ಮಾಡಿದ್ದಾರೆ.ಅಲ್ಲದೆ ಕಾಪು ಠಾಣೆಯಲ್ಲಿ ಯುವಮೋರ್ಚಾ ಈಗಾಗಲೇ ದೂರು ದಾಖಲು ಮಾಡಿತ್ತು.ಆದರೆ ಯಶ್ ಪಾಲ್ ಸುವರ್ಣ ತಾವಾಗಿಯೇ ಇನ್ನೂ ದೂರು ದಾಖಲಿಸಿಲ್ಲ.ಎರಡು ಬಾರಿ ಬೆದರಿಕೆ ಹಿನ್ನೆಲೆಯಲ್ಲಿ ಯಶ್ಪಾಲ್ ಗೆ ಭದ್ರತೆ ನೀಡುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
Kshetra Samachara
09/06/2022 04:38 pm