ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುರಸಭೆ ನೂತನ ಅಧ್ಯಕ್ಷೆಯ ಕಾರ್ಯವೈಖರಿಗೆ ಜನ ಮೆಚ್ಚುಗೆ..!

ವರದಿ : ಬಿ ಸಂಪತ್ ನಾಯಕ್ ಕಾರ್ಕಳ

ಕಾರ್ಕಳ : ಪುರಸಭೆಯಲ್ಲಿ ಕಚೇರಿಯಲ್ಲಿ ಯಾವುದೇ ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲ ಅಜಿ೯ನೀಡಿ ತಿಂಗಳು, ವರ್ಷ ಕಳೆದರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ, ದಿನನಿತ್ಯ ಕಚೇರಿಗೆ ಅಲೆದಾಟ ನಡೆಸಿ ಸಾರ್ವಜನಿಕರು ಹೈರಾಣು ಅಗಿದ್ದಾರೆ.

ಈ ನಿಟ್ಟಿನಲ್ಲಿ ನೂತನ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಅವರು ತಾವೇ ಖುದ್ದಾಗಿ ಕಚೇರಿಗೆ ಅಗಮಿಸಿದ ಸಾರ್ವಜನಿಕರ ಬಳಿ ತೆರಳಿ ಅವರ ಸಮಸ್ಯೆಗೆ ಸ್ಪಂದಿಸಿ, ಕೂಡಲೇ ಕಡತಗಳನ್ನು ವಿಲೇವಾರಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಸಾರ್ವಜನಿಕ ರಿಂದ ಶಹಬಾಸ್ ಎಣಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಈ ಹಿಂದೆ ಬಾಕಿ ಇರಿಸಿದ ಕಡತಗಳ ಪಟ್ಟಿಯನ್ನು ಕೂಡಲೇ ವಿಲೇವಾರಿ ಮಾಡುವಂತೆ ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಅಡಳಿತ ವ್ಯವಸ್ಥೆ ಕಪ್ಪು ಚುಕ್ಕಿ ಬರಬಾರದು ಈ ನಿಟ್ಟಿನಲ್ಲಿ ಅವರೆ ದಿನಂಪ್ರತಿ ಕಚೇರಿಗೆ ಅಗಮಿಸಿದ ಸಾರ್ವಜನಿಕರನ್ನು ಬೇಟಿ ಮಾಡಿ ಸಮಸ್ಯೆಗಳಿಗೆ ಸಾದ್ಯವಾದ್ದಲ್ಲಿ ಸ್ಥಳದಲ್ಲಿ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.

ಕಸ ವಿಲೇವಾರಿ ಸಮಸ್ಯೆ :

ಪುರಸಭೆ ಅಧಿಕಾರಿಗಳು ಕಸ ವಿಲೇವಾರಿ ಮಾಡುವಲ್ಲಿ ಇದೀಗ ಸಂಪೂರ್ಣ ವಿಫಲರಾಗಿದ್ದು ಇದೀಗ ರಸ್ತೆ ಬದಿ, ದಾರಿಗಳಲ್ಲಿ ಕಸಗಳು ತುಂಬಿ ತುಳುಕುತ್ತಿದೆ.

ಅಷ್ಟೇ ಅಲ್ಲದೇ ಪರಿಸರ ಗಬ್ಬುನಾರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.

ಈ ಹಿಂದೆ ಮುಖ್ಯಾಧಿಕಾರಿ ರಾಯಪ್ಪ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕಾರ್ಕಳ ನಗರ ಸ್ವಚ್ಛ ಹಾಗೂ ಸುಂದರ ನಗರ ಎಂದೇ ಪ್ರಸಿದ್ದಿ ಮೂಲಕ ಅಂದು ಸ್ವಚ್ಛತೆಗೆ ರಾಜ್ಯಮಟ್ಟದಲ್ಲಿ ಗುರುತಿಸಿ ಪುರಸ್ಕಾರ ನೀಡಿ ಗೌರವಿಸಿತ್ತು.ಅದರೆ ಇತ್ತೀಚಿಗೆ ಅಧಿಕಾರ ವಹಿಸಿಕೊಂಡ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಸ್ವಚ್ಛತೆಗೆ ಆದ್ಯತೆ ನೀಡದೇ ಇರುವುದು ಕಾರ್ಕಳ ಶೋಚನೀಯ ಸ್ಥಿತಿಗೆ ತಲುಪಲು ಕಾರಣವಾಗಿದೆ.

ಕಾರ್ಕಳ ಇದೀಗ ದುರ್ವಾಸನೆಯಿಂದ ಕೂಡಿದೆ ಇದು ಸಾರ್ವಜನಿಕರ ಅಭಿಪ್ರಾಯ ವಾಗಿದೆ.

ಈ ಎಲ್ಲಾ ವಿಚಾರ ಇದೀಗ ಅದ್ಯಕ್ಷ ರ ಗಮನಕ್ಕೆ ಬಂದ ಕೂಡಲೇ ಕಸ ವಿಲೇವಾರಿ ಸಮರ್ಪಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಮ್ಮ ಅವಧಿಯಲ್ಲಿ ಒಳ್ಳೆಯ ಆಡಳಿತ ನೀಡಬೇಕು ಎಂಬ ಆಸೆ ನನ್ನಲ್ಲಿ ಇದೆ. ಇದಕ್ಕೆ ಎಲ್ಲಾ ಸದಸ್ಯರು ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಸುಮಾಕೇಶವ್ ( ಅಧ್ಯಕ್ಷೆ ಪುರಸಭೆ)

Edited By : Nirmala Aralikatti
Kshetra Samachara

Kshetra Samachara

15/12/2020 05:33 pm

Cinque Terre

8.77 K

Cinque Terre

1

ಸಂಬಂಧಿತ ಸುದ್ದಿ