ಬಂಟ್ವಾಳ: ಗ್ರಾಪಂ ಚುನಾವಣೆ ಡಿ.22ರಂದು ನಡೆಯಲಿದ್ದು, ಎಲ್ಲ 57 ಗ್ರಾಪಂಗಳಲ್ಲೀಗ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಸೋಮವಾರದ ಬಳಿಕ ಕಣದಲ್ಲಿರುವವರ ಸ್ಪಷ್ಟ ಚಿತ್ರಣ ದೊರಕಿದೆ. ಅಂತಿಮವಾಗಿ ಸ್ಪರ್ಧೆಯಲ್ಲಿ 1925 ಮಂದಿ ಉಳಿದಿದ್ದಾರೆ. ಸೋಮವಾರ 550 ಮಂದಿ ಉಮೇದುವಾರಿಕೆ ಹಿಂಪಡೆದಿದ್ದಾರೆ. ಹೀಗಾಗಿ ಒಟ್ಟು 15 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಆದ್ದರಿಂದ 57 ಗ್ರಾಪಂಗಳ 837ರಲ್ಲಿ 822 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ತಾಲೂಕಿನ ಇಡ್ಕಿದುವಿನಲ್ಲಿ 4 ಮಂದಿ ಅವಿರೋಧವಾಗಿ ಆಯ್ಕೆಗೊಂಡರೆ, ಪುಣಚ ಮತ್ತು ವಿಟ್ಲಪಡ್ನೂರಿನಲ್ಲಿ ತಲಾ 2 ಮಂದಿ ಅವಿರೋಧವಾಗಿ ಆಯ್ಕೆಗೊಂಡರು. ಅಮ್ಟಾಡಿ, ಕರಿಯಂಗಳ, ಅಮ್ಮುಂಜೆ, ಮೇರಮಜಲು, ತುಂಬೆ, ಬಾಳ್ತಿಲ, ಫಜೀರು ಗ್ರಾಪಂಗಳಲ್ಲಿ ತಲಾ 1 ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸೋಮವಾರ ಕನ್ಯಾನ ಗ್ರಾಪಂನಲ್ಲಿ 40 ಮಂದಿ ಉಮೇದುವಾರಿಕೆ ಹಿಂಪಡೆದಿದ್ದರು.
Kshetra Samachara
15/12/2020 12:02 pm