ಉಡುಪಿ: ಗ್ರಾಪಂ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪಕ್ಷ ಕಚೇರಿಯಲ್ಲಿ ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳ ಸಭೆ ಜರುಗಿತು.
ಡಿ. 22, 27ರಂದು ನಡೆಯುವ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲಿಸಲು ಎಲ್ಲ ಮುಖಂಡರು, ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕೆಂದು ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಸಭೆಯಲ್ಲಿ ತಿಳಿಸಿದರು.
ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರು ಕಾರ್ಯಗತಗೊಳಿಸಿದ ಮಹಿಳಾ ಮೀಸಲಾತಿ, ನೀರಾವರಿ ಇನ್ನಿತರ ಕಾರ್ಯಕ್ರಮ, ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿಯವರು ಮಾಡಿದ ರೈತರ ಸಾಲಮನ್ನಾ ,ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ವೇತನ ಏರಿಕೆ ಹಾಗೂ ಇನ್ನಿತರ ಕಾರ್ಯಕ್ರಮ ಜಾರಿಗೆ ತಂದ ವಿಚಾರವನ್ನು ಮತದಾರರಿಗೆ ತಿಳಿಸಿ ಮತ ಯಾಚಿಸಬೇಕೆಂದು ಸಲಹೆ ಸೂಚನೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅಡಿಗರು ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ವಂದಿಸಿದರು.
ಜಯಕುಮಾರ್ ಪರ್ಕಳ ,ಬಾಲಕೃಷ್ಣ ಆಚಾರ್ಯ, ಶ್ರೀಕಾಂತ್ ಹೆಬ್ರಿ,ರಮೇಶ್ ಕುಂದಾಪುರ, ಪ್ರಕಾಶ್ ಶೆಟ್ಟಿ, ರವಿರಾಜ್ ಸಾಲಿಯಾನ್, ಎಸ್ಪಿ ಬರ್ಬೋಸ, ಹರಿಣಿ ಆರ್. ಕೋಟ್ಯಾನ್,ಇಕ್ಬಾಲ್ ಆತ್ರಾಡಿ ,ಅಬ್ದುಲ್ ರಜಾಕ್, ಹುಸೇನ್ ಹೈಕಾಡಿ, ಮಾರುತಿ ಮೊಗೇರ, ಮಮತಾ, ಯು.ಎ. ರಶೀದ್, ಆರ್.ಎನ್ ಕೋಟ್ಯಾನ್, ಸನಾವರ್ ಕಲೀಂ, ಇಕ್ಬಾಲ್ ಅಹ್ಮದ್ ಮತ್ತು ಕಾರ್ಯಕರ್ತರು ಹಾಜರಿದ್ದರು.
Kshetra Samachara
04/12/2020 05:03 pm