ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : "ಅಹ್ಮದ್ ಪಟೇಲ್‍ ಕಾಂಗ್ರೆಸ್ ಪಕ್ಷದ ಆಪತ್ಪಾಂಧವ"

ಉಡುಪಿ: ಕಾಂಗ್ರೆಸ್ ಅಗ್ರಗಣ್ಯ ನಾಯಕ, ಪಕ್ಷಕ್ಕೆ ಬಹುತೇಕವಾಗಿ ಜೀವಿತಾವಧಿಯ ಬಹುತೇಕ ಕಾಲ ಮೀಸಲಿಟ್ಟು ಅವಿರತ ಸೇವೆಯೊಂದಿಗೆ ಪ್ರಾಮಾಣಿಕವಾಗಿ ದುಡಿದಿದ್ದ ನಿಷ್ಕಳಂಕ ಕಾಂಗ್ರೆಸ್‍ ನೇತಾರ ಅಹ್ಮದ್ ಪಟೇಲ್‍ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನುಡಿ ನಮನ ಸಲ್ಲಿಸಿದರು.

ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್‍ನ ತುರ್ತು ಸಂತಾಪ ಸಭೆಯಲ್ಲಿ ಮಾತನಾಡಿದರು. ಅಹ್ಮದ್ ಪಟೇಲ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿಯುವುದರೊಂದಿಗೆ ಸೋನಿಯಾ ಗಾಂಧಿಯವರಿಗೆ ದೀರ್ಘಕಾಲ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ಬಿಕ್ಕಟ್ಟಿನ ಸಂದರ್ಭ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಿದ ಅನೇಕ ಉದಾಹರಣೆ ನಮ್ಮ ಮುಂದಿವೆ ಎಂದರು.

ವೆರೋನಿಕಾ ಕರ್ನೇಲಿಯೊ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭಾಸ್ಕರ್ ರಾವ್ ಕಿದಿಯೂರು, ಕುಶಲ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಜ್ಯೋತಿ ಹೆಬ್ಬಾರ್, ವೈ. ಸುಕುಮಾರ್, ಕೀರ್ತಿ ಶೆಟ್ಟಿ, ಹಬೀಬ್ ಆಲಿ, ಸತೀಶ್ ಅಮೀನ್ ಪಡುಕರೆ, ರೋಶನಿ ಒಲಿವರ್, ಹರೀಶ್ ಶೆಟ್ಟಿ ಪಾಂಗಾಳ, ಪೀರು ಸಾಹೇಬ್, ಉದ್ಯಾವರ ನಾಗೇಶ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

25/11/2020 09:01 pm

Cinque Terre

3.79 K

Cinque Terre

0

ಸಂಬಂಧಿತ ಸುದ್ದಿ