ಉದ್ಯಾವರ: ಉದ್ಯಾವರ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ, ಹಿರಿಯ ಕಾಂಗ್ರೆಸ್ ಧುರೀಣ ಆಸ್ಕರ್ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಶೇಖರ್ ಕೆ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಜ್ ಪಳ್ಳಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ 47ನೇ ಮಹಾಸಭೆಯು ಸಂಸ್ಥೆಯ ಅಧ್ಯಕ್ಷರಾದ ತಿಲಕರಾಜ್ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿಯವರು ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸೋಮಶೇಖರ ಸುರತ್ಕಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್ ಮತ್ತು ಶರತ್ ಕುಮಾರ್ ಯು. ಪದ್ಮನಾಭ ಕಾಮತ್, ಚಂದ್ರಾವತಿ ಎಸ್. ಭಂಡಾರಿ ಉಪಸ್ಥಿತರಿದ್ದರು.
ಸದಸ್ಯರನ್ನು ಉದ್ದೇಶಿಸಿ ಹಿರಿಯ ಸದಸ್ಯರಾದ ಶೇಖರ್ ಕೆ. ಕೋಟ್ಯಾನ್, ಆಬಿದ್ ಆಲಿ, ರಫೀಕ್ ಯೂಸೂಫ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು.
Kshetra Samachara
16/10/2020 09:59 pm