ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ :ಅಂತರ್ರಾಷ್ಟ್ರೀಯ ಕರಾಟೆಯಲ್ಲಿ ಅವ್ನಿ ಪೂಜಾರಿಗೆ ಚಿನ್ನ

ಕುಂದಾಪುರ: ಶಿವಮೊಗ್ಗದ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 3ನೇ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಿರಣ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ (ರಿ.) ಇದರ ವಿದ್ಯಾರ್ಥಿನಿ ಅವ್ನಿ ಪೂಜಾರಿಗೆ 15 ವರ್ಷದೊಳಗಿನ ಬ್ಲಾಕ್ಬೆಲ್ಡ್ ಕಟಾ ವಿಭಾಗದಲ್ಲಿ ಚಿನ್ನದ ಪದಕ, ಹಾಗೂ ಉಡುಪಿಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ ಸ್ಥಾನ ಲಭಿಸಿದೆ.

ಈಕೆ ಕುಂದಾಪುರದ ಓಕ್ವುಡ್ ಇಂಡಿಯನ್ ಸ್ಕೂಲ್ನ 7ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು KDF ಕರಾಟೆ ಸಂಸ್ಥೆಯಲ್ಲಿ ತರಬೇತುದಾರರಾದ ಕಿರಣ್ ಕುಂದಾಪುರ ಮತ್ತು ಸಂದೀಪ್ ವಿ. ಕೆ. ತರಬೇತಿ ನೀಡುತ್ತಿದ್ದಾರೆ. ಅವ್ನಿ ಪೂಜಾರಿ ವಿಜೇತಾ ಮತ್ತು ಉದಯ ಪೂಜಾರಿ ದಂಪತಿಗಳ ಪುತ್ರಿ.

Edited By : PublicNext Desk
Kshetra Samachara

Kshetra Samachara

07/09/2022 01:16 pm

Cinque Terre

576

Cinque Terre

0

ಸಂಬಂಧಿತ ಸುದ್ದಿ