ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ನಾವುಂದ ಸಾಲ್ಬುಡದ ಕುದ್ರಿ ನಲ್ಲಿ ಅಣುಕು ಪ್ರದರ್ಶನ

ಬೈಂದೂರು: ನೆರೆಪೀಡಿತ ಪ್ರದೇಶವಾಗಿರುವ ಬೈಂದೂರು ತಾಲೂಕು ನಾವುಂದ ಗ್ರಾಮದ ಸಾಲ್ಬುಡದ ನದಿತೀರದಲ್ಲಿ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ನೆರೆ ಕಾಣಿಸಿಕೊಂಡಾಗ ಕೈಗೊಳ್ಳಬೇಕಾದ ನಿರ್ಧಾರವನ್ನು ಸಾರ್ವಜನಿಕರಿಗೆ ಇಲಾಖೆಯ ವತಿಯಿಂದ ರಕ್ಷಣ ಕಾರ್ಯವೈಖರಿಯನ್ನು ಪ್ರಾತ್ಯಕ್ಷಿಕ ರೂಪದಲ್ಲಿ ತೋರಿಸುವ ಸಲುವಾಗಿ ಅಣಕು ಪ್ರದರ್ಶನ ತಾಲೂಕು ಆಡಳಿತ, ಅಗ್ನಿಶಾಮಕ ದಳದ ನೇತೃತ್ವದಲ್ಲಿ ನಡೆಯಿತು.

ಅಗ್ನಿಶಾಮಕದಳದ ಕಾರ್ಯಾಚರಣೆ, ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವ್ಯಕ್ತಿಯ ರಕ್ಷಣೆ, ಹಾಗೂ ಪ್ರಥಮ ಚಿಕಿತ್ಸೆ ಇತ್ಯಾದಿಗಳ ಪ್ರಾತ್ಯಕ್ಷಿಕೆ ನಡೆಯಿತು.

ಪ್ರತಿ ವರ್ಷ ಈ ಕುದ್ರಿ ನಲ್ಲಿ ಮಳೆಗಾಲದಲ್ಲಿ ಹಲವು ಬಾರಿ ನೆರೆಗೆ ಈ ಭಾಗ ಸಂಪೂರ್ಣ ಜಲಾವೃತವಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ತಹಶೀಲ್ದಾರ್ ಶೋಭಾ ಲಕ್ಷ್ಮಿ, ಮಳೆಗಾಲದಲ್ಲಿ ಪ್ರವಾಹ ಹೆಚ್ಚಿದ್ದಾಗ ಸಮಸ್ಯೆ ಉಂಟಾದ ಸಂದರ್ಭ ಸಾರ್ವಜನಿಕರು ಏನು ಮಾಡಬೇಕು, ಇಲಾಖೆ, ಅಗ್ನಿಶಾಮಕ ದಳದವರು ಹೇಗೆ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎನ್ನುವುದನ್ನು ಸಾರ್ವಜನಿಕರ ಮುಂದೆ ಅಣಕು ಪ್ರದರ್ಶನದ ರೂಪದಲ್ಲಿ ಮಾಡಿ ತೋರಿಸಲಾಗಿದೆ. ಈ ರೀತಿಯಾಗಿ ಜನರಿಗೆ ಮಾರ್ಗದರ್ಶನ ನೀಡಬೇಕು ಎನ್ನುವ ಇಲಾಖೆ ಸೂಚನೆಯಂತೆ ಇವತ್ತು ಈ ಅಣಕು ಪ್ರದರ್ಶನ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ಮುಂದಿನಮನಿ, ನಾವುಂದ ಗ್ರಾ.ಪಂ.ಅಧ್ಯಕ್ಷೆ ಜಾನಕಿ ಮೊಗವೀರ, ಉಪಾಧ್ಯಕ್ಷೆ ನಿರ್ಮಲಾ ಶೆಟ್ಟಿ, ಶಿಕ್ಷಣ ಇಲಾಖೆಯ ವಿಶ್ವನಾಥ ಶೆಟ್ಟಿ, ಗ್ರಾ.ಪಂ.ಸದಸ್ಯರು, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾಕಾರ್ಯಕರ್ತೆಯರು ಸ್ಥಳೀಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/06/2022 09:34 pm

Cinque Terre

2.72 K

Cinque Terre

1

ಸಂಬಂಧಿತ ಸುದ್ದಿ