ಉಡುಪಿ: ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಉಡುಪಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್. ನಟರಾಜ್ ಇವರಿಂದು ಉಡುಪಿ ವಕೀಲರ ಸಂಘಕ್ಕೆ ಭೇಟಿ ನೀಡಿದರು.ವಕೀಲರ ಸಂಘದ ವತಿಯಿಂದ ನ್ಯಾಯಮೂರ್ತಿಗಳಾದ ಆರ್. ನಟರಾಜ್ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಇದಕ್ಕೂ ಮುನ್ನ ಅವರು ಮೂರನೇ ಮಹಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕೋರ್ಟ್ ಹಾಲ್ ನ್ನು ವೀಕ್ಷಿಸಿದರು.ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ,ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ನಝೀರ್ ಅವರು ಫೆಬ್ರವರಿ 19 ರಂದು ನೂತನ ಕೋರ್ಟ್ ಹಾಲ್ ನ್ನು ಉದ್ಘಾಟಿಸಲಿದ್ದಾರೆ.ಅದಕ್ಕೂ ಮುನ್ನ ವೀಕ್ಷಣೆಗೆ ಬಂದಿದ್ದೇನೆ.ಏನಾದರೂ ವ್ಯವಸ್ಥೆಗಳು ಬೇಕಿದ್ದರೆ ನನಗೆ ಪ್ರಸ್ತಾವನೆ ಕಳಿಸಿ ಕೊಡಿ.ಅದೇ ರೀತಿ ವಕೀಲರ ಭವನದ ಬೇಡಿಕೆಯೂ ಇದೆ.ಶೀಘ್ರ ವಕೀಲರ ಭವನ ಇಲ್ಲಿ ನಿರ್ಮಾಣ ಆಗಲಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿದರು. ನ್ಯಾಯಮೂರ್ತಿಗಳ ಪರಿಚಯವನ್ನು ನ್ಯಾಯವಾದಿ ಸುನಿಲ್ ಮೂಲ್ಯ ಮಾಡಿದರು. ಅಧ್ಯಕ್ಷೀಯ ಭಾಷಣವನ್ನು
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಮಣ್ಯ ಜೆ.ಎನ್.ಮಾಡಿದರು.ಫೋಕ್ಸೋ ನ್ಯಾಯಾಧೀಶೆ ಕಲ್ಪನಾ ಎರ್ಮಾಳ್ ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಲಾ ಎಸ್ ,ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್, ಹಿರಿ ಕಿರಿಯ ನ್ಯಾಯಾಧೀಶರು ಉಪಸ್ಥಿತರಿದ್ದರು.ನ್ಯಾಯವಾದಿ ರಾಜಶೇಖರ ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
05/02/2022 11:59 pm