ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಯಾವರ: "ಹೆಣ್ಣನ್ನು ಪೂಜಿಸುವುದು ಬೇಡ, ಬದುಕಲಾದರೂ ಅವಕಾಶ ಕೊಡಿ"

ಉದ್ಯಾವರ: ಭಾರತ ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ಗೌರವಿಸುತ್ತಿದೆ ಮತ್ತು ಆಕೆಯನ್ನು ಪೂಜಿಸುವ ಸಂಸ್ಕತಿಯಿಂದ ಬೆಳೆದು ಬಂದಿದೆ. ನಮ್ಮ ಪ್ರಧಾನಿಯವರು "ಬೇಟಿ ಪಡಾವೋ, ಬೇಟಿ ಬಚಾವೋ" ಘೋಷಣೆ ಹಿಡಿದುಕೊಂಡು ಸಾಕಷ್ಟು ರಾಜಕೀಯ ಮಾಡುತ್ತಿದ್ದಾರೆ. ಆದರೆ, ದಿನ ಬೆಳಗಾದರೆ ದೇಶದಲ್ಲಿ ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಂತೂ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ನಮ್ಮನ್ನು ಆಳುವ ಸರಕಾರ ಮೌನ ವಹಿಸುತ್ತಿದೆ. ಹೆಣ್ಣನ್ನು ಪೂಜಿಸುವುದು ಬೇಡ, ಅವರನ್ನು ನಿರಾತಂಕವಾಗಿ ಬದುಕಲು ಬಿಡಿ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಹೇಳಿದರು.

ಅವರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ, ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಎಸ್.ಸಿ., ಎಸ್.ಟಿ. ಘಟಕ ಜಂಟಿ ಆಶ್ರಯದಲ್ಲಿ ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಜರಗಿದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೆಲನ್ ಫೆರ್ನಾಂಡಿಸ್, ಎಸ್.ಸಿ., ಎಸ್.ಟಿ. ಘಟಕದ ಗಿರೀಶ್ ಗುಡ್ಡೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

05/10/2020 11:55 pm

Cinque Terre

5.67 K

Cinque Terre

1

ಸಂಬಂಧಿತ ಸುದ್ದಿ