ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ : ಭಾರಿ ಮಳೆಗೆ ಸೇತುವೆ ಕುಸಿತ - ಸಂಪರ್ಕ ಕಡಿತ

ಕಾರ್ಕಳ: ನಿನ್ನೆ ಸುರಿದ ಭಾರಿ ಮಳೆಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಚೌಕಿ ಬಳಿಯ ಪೂಂಜಾಜೆ ಎಂಬಲ್ಲಿನ ಸೇತುವೆ ಕುಸಿದಿದ್ದು ಮಾಳ ನೂರಾಳು ಬೆಟ್ಟು ಸಂಪರ್ಕ ಕಡಿತಗೊಂಡಿದೆ. 'ನಮ್ಮಗ್ರಾಮ ನಮ್ಮರಸ್ತೆ' ಯೋಜನೆಯಡಿ ಕಳೆದ 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಸೇತುವೆಯ ಪಿಲ್ಲರ್ ದುರ್ಬಲಗೊಂಡು ಸೇತುವೆಯ ಮಧ್ಯಭಾಗವೇ ಕುಸಿದು ಬಿದ್ದು ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ಮಾಳ ಹಾಗೂ ಈದು ಗ್ರಾಮಗಳ ಸಂಪರ್ಕ ಕೊಂಡಿಯಾಗಿದ್ದ ಈ ಸೇತುವೆ ಕುಸಿತದಿಂದ ಜನರ ಓಡಾಟಕ್ಕೆ ತೊಡಕಾಗಿದ್ದು, ಸೇತುವೆ ದುರಸ್ತಿಗೆ ಒತ್ತಾಯಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲೇ ಸೇತುವೆ ದುರಸ್ತಿಗೊಳಿಸುವ ಭರವಸೆ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

07/09/2022 01:02 pm

Cinque Terre

566

Cinque Terre

0

ಸಂಬಂಧಿತ ಸುದ್ದಿ