ಉಡುಪಿ: ಆಸರೆ ಚಾರಿಟೇಬಲ್ ಟ್ರಸ್ಟ್ ನ ಸಮಾಜಮುಖಿ ಕಾರ್ಯ ರಾಜ್ಯಕ್ಕೆ ಮಾದರಿ ಎಂದು ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಜೈಶಂಕರ್ ಹೇಳಿದರು.
ಅವರು ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಅವಕಾಶ ವಂಚಿತ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯದ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ಕೋವಿಡ್ ಲಾಕ್ ಡೌನ್ ಸಂದರ್ಭ ಲಕ್ಷಾಂತರ ಅಪೇಕ್ಷಿತ ವರ್ಗದವರಿಗೆ ಊಟ, ಕಿಟ್, ಮಾಸ್ಕ್ ವಿತರಣೆ ಮುಂತಾದ ಸಾಮಾಜಿಕ ಚಟುವಟಿಕೆ ಉಡುಪಿ ಜಿಲ್ಲೆ ಕೋವಿಡ್ ಎದುರಿಸುವಲ್ಲಿ ಬಹಳಷ್ಟು ಸಹಕಾರಿಯಾದವು ಎಂದರು.
ಉಡುಪಿಯ ಏಕೈಕ ಗೋಲಿಸೋಡ ತಯಾರಕ ಶೀನ ನಾಯ್ಕ ಅವರಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು.
ಇತ್ತೀಚೆಗೆ ಮಹಾನೆರೆ ಸಂದರ್ಭ ಮನೆ ಕಳಕೊಂಡ ಸ್ವಾತಿ ಎಂಬವರಿಗೆ ಟ್ರಸ್ಟ್ ವತಿಯಿಂದ ನೀಡಲಾದ ಧನಸಹಾಯವನ್ನು ದ.ಕ., ಉಡುಪಿ ಜಿಲ್ಲಾ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ ಹಸ್ತಾಂತರಿಸಿದರು. ನಗರಸಭಾ ಸದಸ್ಯರಾದ ಗೀತಾ ದೇವರಾಯ ಶೇಟ್, ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.
Kshetra Samachara
13/10/2020 07:24 pm