ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಹೊಸ ಮಸೂದೆ ರೈತ ಸ್ವಾವಲಂಬಿಯಾಗಲು ಸಹಕಾರಿ; ಸಂಸದೆ ಶೋಭಾ

ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ಅವರು ಇಂದು ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳನ್ನು, 3 ಮಹತ್ವದ ಮಸೂದೆಗಳ ಕುರಿತು, ಅದರ ಸಾಧಕಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿದರು.

ರೈತನನ್ನು ಸ್ವಾವಲಂಬಿ, ಸ್ವತಂತ್ರಗೊಳಿಸುವ ಹಾಗೂ ಆತ ಬೆಳೆದ ಬೆಳೆಗಳಿಗೆ ಸ್ಪರ್ಧಾತ್ಮಕ ದರ ದೊರಕಿಸಿಕೊಡುವಲ್ಲಿ ಈ ಮಸೂದೆಗಳು ಸಹಕಾರಿಯಾಗಿವೆ.

ರೈತನನ್ನು ಆರ್ಥಿಕವಾಗಿ ಸಧೃಢವಾಗಿಸುವ ನಿಟ್ಟಿನಲ್ಲಿ ಈ ಮಸೂದೆಗಳನ್ನು ತರಲಾಗಿದೆ.

ರೈತನ ಬದುಕನ್ನು ಹಸನಾಗಿಸಲು, ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕಿಸಿಕೊಡಲು, ರೈತನಿಗೆ ಕಾನೂನಿನ ಭದ್ರತೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಕಟಿಬದ್ಧವಾಗಿದೆ ಎಂದರು.

Edited By : Nirmala Aralikatti
Kshetra Samachara

Kshetra Samachara

10/10/2020 02:34 pm

Cinque Terre

4.21 K

Cinque Terre

0

ಸಂಬಂಧಿತ ಸುದ್ದಿ