ಕಾಪು: ಕಾಪು ಉಳಿಯಾರಗೋಳಿ, ಕೈಪುಂಜಾಲುವಿನ ತಾಳಿ ತೋಟದ ನಿವಾಸಿ ವಿನೋದರ ಪೂಜಾರಿ (62 ) ಉಡುಪಿಯ ಆಸ್ಪತ್ರೆಯಲ್ಲಿ ಇಂದು ನಿಧನರಾದರು, ಮೃತರು ಓರ್ವ ಪುತ್ರ ಪತ್ನಿ, ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕೆಲದಿನಗಳ ಹಿಂದೆ
ಮೂರ್ತೆ ಕೆಲಸ ಮಾಡುವಾಗ ಮರದಿಂದ ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಇವರು ,ಚಿಕಿತ್ಸೆ ಫಲಕಾರಿಯಾಗದೆ ಜೂನ್ 21ರ ಬೆಳಿಗ್ಗೆ ನಿಧನರಾಗಿದ್ದಾರೆ.
ಕೃಷಿಕರಾಗಿದ್ದ ಅವರು ಮೂರ್ತೆದಾರ ಕುಲಕಸುಬುವನ್ನು ಮಾಡಿಕೊಂಡಿದ್ದರು .ಮೃತರು ಸ್ಥಳೀಯವಾಗಿ ಜನೋಪಕಾರಿ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಜನಮನ್ನಣೆ ಗಳಿಸಿದ್ದರು. ಮೃತರ ಮನೆಗೆ ವಿನಯಕುಮಾರ್ ಸೊರಕೆ, ಕಾಪು ಪುರಸಭೆ ಸದಸ್ಯೆ ಶೋಭಾ ಬಂಗೇರ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
Kshetra Samachara
21/06/2022 04:22 pm