ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹಲವೆಡೆ ಭಾರೀ ಮಳೆ : ಧರೆಗುರುಳಿದ ವಿದ್ಯುತ್ ಕಂಬಗಳು : ಮನೆಗಳಿಗೆ ಹಾನಿ

ಕುಂದಾಪುರ: ನಿನ್ನೆ ರಾತ್ರಿ ಕುಂದಾಪುರ ಮತ್ತು ಬೈಂದೂರಿನ ಹಲವೆಡೆ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದೆ. ಒಮ್ಮಿಂದೊಮ್ಮೆಲೆ ಸುರಿದ ಮಳೆಗೆ ಕುಂದಾಪುರ ನಗರದಲ್ಲಿ ವಾಹನ ಸವಾರರಿಗೆ ಭಾರೀ ಅಡಚಣೆಯಾಯಿತು. ಗಾಳಿ - ಮಳೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು.

ಕೋಟೇಶ್ವರ, ತೆಕ್ಕಟ್ಟೆ ಬಸ್ರೂರು, ಕಂಡ್ಲೂರು, ವಂಡ್ಸೆ, ಜಡ್ಕಲ್, ಸೆಳ್ಕೊಡು, ಮುದೂರು, ಕೊಲ್ಲೂರು, ಬೈಂದೂರು, ಶಿರೂರು, ಉಪ್ಪುಂದ, ನಾಗೂರು, ಕಿರಿಮಂಜೇಶ್ವರಗಳಲ್ಲೂ ಮಳೆ ಸಾಕಷ್ಟು ಹಾನಿ ಉಂಟು‌ ಮಾಡಿದೆ.ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿ ಜನ ಪರದಾಡಬೇಕಾಯಿತು.

ಗಂಗೊಳ್ಳಿಯ ನೀರಿನ ಟ್ಯಾಂಕ್ ಬಳಿ ಸುಬ್ರಾಯ ಶೇರಿಗಾರ್ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾದ ಘಟನೆ ಸಂಭವಿಸಿದೆ. ಮನೆಯೊಳಗಿದ್ದವರು ಹೊರಗೆ ಓಡಿ ಪಾರಾಗಿದ್ದಾರೆ. ಮನೆ ಮೇಲೆಯೇ ಮರ ಬಿದ್ದ ಪರಿಣಾಮ ಟಿವಿ, ಇನ್ನಿತರ ವಸ್ತುಗಳು, ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದ್ದು, ಜಾನುವಾರು ಕೊಟ್ಟಿಗೆಗೂ ಹಾನಿಯಾಗಿದೆ.ಗಂಗೊಳ್ಳಿಯ ಇನ್ನಿತರ ಹಲವೆಡೆಗಳಲ್ಲಿಯೂ ಗಾಳಿ ಮಳೆಯಿಂದಾಗಿ ಹಾನಿ ಉಂಟಾಗಿದೆ.

Edited By : PublicNext Desk
Kshetra Samachara

Kshetra Samachara

04/04/2022 10:06 am

Cinque Terre

1.63 K

Cinque Terre

0

ಸಂಬಂಧಿತ ಸುದ್ದಿ