ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಬೆಳ್ಮಣ್ಣು ಜಂತ್ರ ಬಳಿ ಕಾಡಿಗೆ ಬೆಂಕಿ; ಅಮೂಲ್ಯ ಮರಗಳ ನಾಶ

ಕಾರ್ಕಳ: ತಾಲೂಕಿನ ಬೆಳ್ಮಣ್ಣು ಜಂತ್ರ ಸಮೀಪದ ಕಾಡಿಗೆ ಭಾನುವಾರ ತಡರಾತ್ರಿ ಬೆಂಕಿ ಬಿದ್ದ ಪರಿಣಾಮ ಗಿಡ- ಮರಗಳು ಬೆಂಕಿಗೆ ಆಹುತಿಯಾಗಿದೆ.

ಈ ಕುರಿತು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿ ಬೆಂಕಿ‌ ನಂದಿಸುವಲ್ಲಿ‌ ಹರಸಾಹಸ ಪಡುತ್ತಿದ್ದಾರೆ. ಕಾಡಿಗೆ ಬೆಂಕಿ ಬಿದ್ದಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಇದು ಆಕಸ್ಮಿಕವೋ? ಅಥವಾ ಕಿಡಿಗೇಡಿಗಳ ಕುಕೃತ್ಯವೋ? ತಿಳಿದು ಬಂದಿಲ್ಲ. ಸ್ಥಳಕ್ಕೆ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

28/12/2020 08:37 am

Cinque Terre

9.61 K

Cinque Terre

0

ಸಂಬಂಧಿತ ಸುದ್ದಿ