ಕಾರ್ಕಳ: ಆನೆಕೆರೆಯ ಹೊರ ಹರಿವು ನೀರಿಗೆ ಅಡ್ಡಲಾಗಿ ಅಳವಡಿಸಿದ್ದ ಗೇಟ್ ಏಕಾಏಕಿ ಓಪನ್ ಮಾಡಿದ ಪರಿಣಾಮ ಕೃತಕ ನೆರೆ ಸೃಷ್ಟಿ ಯಾಗಿದೆ.
ಹವಾಮಾನ ಇಲಾಖೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದರೂ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮಕೈ ಗೊಳ್ಳದೆ ಇರುವುದು ಈ ದುರಂತಕ್ಕೆ ಕಾರಣವಾಗಿದೆ.
ಆನೆಕೆರೆಯ ಗೇಟ್ ಮೊದಲೇ ತೆರವು ಮಾಡದೇ ನಿರ್ಲಕ್ಷಿಸಿದ್ದ ಹಿನ್ನೆಲೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ನಿರಂತರ ಮಳೆಯಿಂದಾಗಿ ಇದೀಗ ಆನೆಕೆರೆಯಲ್ಲಿ ನೀರು ತನ್ನ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈ ನಡುವೆ ಇದೀಗ ಪುರಸಭೆ ಗೇಟ್ ತೆರವು ಮಾಡಿ ಜವಾಬ್ದಾರಿ ಯಿಂದ ತಪ್ಪಿಸಿಕೊಂಡಿದೆ.
ಪುರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಬೇಜವಾವ್ದಾರಿ ಯಿಂದಾಗಿ ಇದೀಗ ಕೃತಕ ನೆರೆ ಸೃಷ್ಟಿಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ತಾಲೂಕು, ಪುರಸಭೆ ವ್ಯಾಪ್ತಿಯ ಬಹುತೇಕ ಕಡೆ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಪರದಾಟ ನಡೆಸುತ್ತಿದ್ದಾರೆ.
ಅದರೆ, ಇತ್ತ ಅಧಿಕಾರಿಗಳು ಮನೆಯಲ್ಲಿ ಬೆಚ್ಚಗೆ ಕುಳಿತು ಘಟನೆ ಪೋಟೊಗಳನ್ನು ವಾಟ್ಸ್ ಆ್ಯಪ್ ಗಳಲ್ಲಿ ತರಿಸಿಕೊಂಡು ತಮ್ಮ ಮೇಲಾಧಿಕಾರಿಗಳಿಗೆ ರವಾನಿಸಿ ಮಾಹಿತಿ ನೀಡುತ್ತಿರುವುದು ಕಂಡು ಬಂದಿದೆ.
ಅಲ್ಲದೆ, ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಬಹುತೇಕ ಮನೆಗಳು ಜಲಾವೃತ ಗೊಂಡಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
20/09/2020 05:52 pm