ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ (ಜು.26) ದಿನ ಪೂರ್ತಿ ವಿದ್ಯುತ್ ಕಡಿತ!

ಸುಳ್ಯ: ತುರ್ತು ನಿರ್ವಹಣಾ ಕೆಲಸಗಳು ಇರುವುದರಿಂದ ಜು.26 ರಂದು ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ದಿನ ಪೂರ್ತಿ ವಿದ್ತುತ್ ಕಡಿತ ಆಗಲಿದೆ ಎಂದು ಮೆಸ್ಕಾಂ‌ ಪ್ರಕಟಣೆ ತಿಳಿಸಿದೆ.

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ.

11 ಕೆವಿ ಬೆಳ್ಳಾರೆ -1,ಬೆಳ್ಳಾರೆ -2 ನೆಟ್ಟಾರು,ಕಳಂಜ,ಮುರುಳ್ಯ , ಪೆರ್ಲಂಪಾಡಿ,ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ತನಕ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಮೆಸ್ಕಾಂ ಸಹಾಯಕು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Edited By :
Kshetra Samachara

Kshetra Samachara

26/07/2022 09:25 am

Cinque Terre

4.71 K

Cinque Terre

0

ಸಂಬಂಧಿತ ಸುದ್ದಿ