ಮೂಡುಬಿದಿರೆ : ಆಳ್ವಾಸ್ ಸಂಸ್ಥೆಯಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್-ಬ್ಯಾಡ್ಮಿಂಟನ್ ಪಂದ್ಯಾವಳಿಯ ನಾಲ್ಕನೇ ದಿನದ ಆಟದಲ್ಲಿ ಕರ್ನಾಟಕ ಹಾಗೂ ಭಾರತೀಯ ರೈಲ್ವೇ ತಂಡಗಳು ನಾಲ್ಕರ ಘಟ್ಟಕ್ಕೆ ಆಯ್ಕೆಯಾಗಿದೆ.
ಪುರುಷರ ಕ್ವಾಲಿಫಯರ್ ಪಂದ್ಯಾಟ:
ಕೇರಳ ತಂಡವು ಹರಿಯಾಣ ತಂಡವನ್ನು 35-17, 35-23 ಅಂತರದಿಂದ, ಕೆನರಾ ಬ್ಯಾಂಕ್ ತಂಡವು ಪುದುಚೆರಿ ತಂಡವನ್ನು 35-21, 35-14 ಅಂತರದಿಂದ ಮಣಿಸಿತು.
ಪುರುಷರ ಪ್ರೀ-ಕ್ವಾಟರ್ ಫೈನಲ್:
ಕೇರಳ ತಂಡವು ಮುಂಬೈ ತಂಡವನ್ನು 35-27, 35-22 ನೇರ ಸೆಟ್ ಗಳ ಅಂತರದಿಂದ, ಕೆನರಾ ಬ್ಯಾಂಕ್ ತಂಡವು ಚತ್ತೀಸ್ ಗಢ ವಿರುದ್ಧ 35-18, 35-22 ಅಂತರದಿಂದ ಜಯಗಳಿಸಿತು.
ಪುರುಷರ ಕ್ವಾಟರ್ ಫೈನಲ್ಸ್:
ಭಾರತೀಯ ರೈಲ್ವೇ ತಂಡವು ಕೆನರಾ ಬ್ಯಾಂಕ್ ತಂಡ ವಿರುದ್ಧ 35-19, 35-19 ಅಂತರಗಳಿಂದ, ತೆಲಂಗಾಣ ತಂಡವು ಮಹಾರಾಷ್ಟ್ರ ತಂಡವನ್ನು 35-18,35-19 ಅಂತರದಿಂದ, ಆಂಧ್ರಪ್ರದೇಶ ತಂಡವು ತಮಿಳುನಾಡು ತಂಡದ ವಿರುದ್ಧ 35-33, 36-34 ಸೆಟ್ ಗಳಿಂದ ಗೆಲುವು ಸಾಧಿಸಿತು. ಕರ್ನಾಟಕ ಹಾಗೂ ಕೇರಳ ತಂಡಗಳ ನಡುವಿನ ಆಟವನ್ನು ಮಂದ ಬೆಳಕಿನ ಕಾರಣದಿಂದ ಕೊನೆಯ ದಿನಕ್ಕೆ ಮುಂದೂಡಲಾಯಿತು.
ಮಹಿಳಾ ಕ್ವಾಲಿಫಯರ್ ಪಂದ್ಯಾಟ:
ಪುದುಚೆರಿ ತಡವು ಪಶ್ಚಿಮ ಬಂಗಾಳ ತಂಡವನ್ನು 35-18, 35-24, ಕೇರಳ ತಂಡವು ಮುಂಬೈ ತಂಡವನ್ನು 35-19, 35-14 ನೇರ ಸೆಟ್ ನಿಂದ ಸೋಲಿಸಿತು. ಪ್ರೀ-ಕ್ವಾಟರ್ ಫೈನಲ್ ಪಂದ್ಯಾಟದಲ್ಲಿ ಪುದುಚೆರಿ ತಂಡವು ರಾಜಸ್ಥಾನ ತಂಡವನ್ನು 35-15, 35-20 ಅಂತರದಿಂದ ಮಣಿಸಿತು. ಕೇರಳ ತಂಡವು ತೆಲಂಗಾಣ ತಂಡವನ್ನು 35-18, 35-18 ಅಂತರದಿಂದ ಸೋಲಿಸಿತು.
ಮಹಿಳಾ ಕ್ವಾಟರ್ ಫೈನಲ್:
ತಮಿಳುನಾಡು ತಂಡವು ಕೇರಳ ತಂಡವನ್ನು 35-25, 35-28 ಸೆಟ್ಗಳಿಂದ, ಕರ್ನಾಟಕ ತಂಡವು ಪುದುಚೆರಿ ತಂಡವನ್ನು 35-21, 35-14 ಅಂತರದಿಂದ ಮಣಿಸಿ ಗೆಲುವು ಸಾಧಿಸಿದವು. ಆಂಧ್ರಪ್ರದೇಶ ತಂಡವು ಬಿಹಾರ ತಂಡವನ್ನು 36-34, 35-22 ಅಂತರದಿಂದ ಸೋಲಿಸಿತು. ಮಹಾರಾಷ್ಟ್ರ ತಂಡವು ಚತ್ತೀಸ್ಗಢ ತಂಡವನ್ನು 21-35, 35-31, 36-34 ಅಂತರಗಳಿಂದ ಮಣಿಸಿತು.
Kshetra Samachara
06/03/2022 08:16 pm