ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡು: ಅಂಗರಗುಡ್ಡೆ ಕ್ರಿಕೆಟ್ ಪ್ರೀಮಿಯರ್ ಲೀಗ್; 'ನಂದಿನಿ ಫ್ರೆಂಡ್ಸ್' ಚಾಂಪಿಯನ್

ಮುಲ್ಕಿ: ಇಲ್ಲಿನ ಕಾರ್ನಾಡು ಗಾಂಧಿ ಮೈದಾನದಲ್ಲಿ ನಡೆದ ಅಂಗರಗುಡ್ಡೆ ಪ್ರೀಮಿಯರ್ ಲೀಗ್- 2022 ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ನಂದಿನಿ ಫ್ರೆಂಡ್ಸ್ ತಂಡವು ಐಎಚ್ ಸಿ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಅಂಗರಗುಡ್ಡೆ ಪ್ರೀಮಿಯರ್ ಲೀಗ್ ಟ್ರೋಫಿ- 2022 ಹಾಗೂ 30,000 ರೂ. ನಗದು ಗೆದ್ದುಕೊಂಡಿದೆ.

ರನ್ನರ್ ಅಪ್ ಆದ ಐಎಚ್ ಸಿ ಸೂಪರ್ ಕಿಂಗ್ಸ್ ತಂಡ ಟೋಪಿ ಸಹಿತ 20,000 ರೂ. ನಗದು ಪಡೆಯಿತು.

ಅಂತಿಮ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನಂದಿನಿ ಫ್ರೆಂಡ್ಸ್ ತಂಡದ ದೀಪಕ್, ಸರಣಿಶ್ರೇಷ್ಠ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಕ್ರಮವಾಗಿ ಐಎಚ್ ಸಿ ಸೂಪರ್ ಕಿಂಗ್ಸ್ ತಂಡದ ನಾಗರಾಜ್, ಸುಜನ್ ಹಾಗೂ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಡಿ.ಕೆ. ಫ್ರೆಂಡ್ಸ್ ತಂಡದ ರೂಪೇಶ್ ಶೆಟ್ಟಿ ಗಳಿಸಿದರು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಕೀಲ ಸಂಕಪ್ಪ ಎ. ಉಡುಪಿ, ಮುಲ್ಕಿ ನಪಂ ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಉದ್ಯಮಿ ಅನಿಲ್ ಕೊಲಕಾಡಿ, ಶೇಖರ್ ಕರ್ಕೇರ, ನಿಸಾರ್ ಅಹಮದ್, ಅಜೀಜ್ ಅಂಗರಗುಡ್ಡೆ, ಚಂದ್ರಹಾಸ ಎರ್ಮಾಳ್, ಪ್ರದೀಪ್ ಆಚಾರ್ಯ, ಪುರಂದರ ಶೆಟ್ಟಿಗಾರ್, ಸತೀಶ್ ಕೋಟ್ಯಾನ್, ನವೀನ್ ಗುಜರನ್, ಸಂತೋಷ್ ದೇವಾಡಿಗ, ಮುಬಾರಕ್ ಉಪಸ್ಥಿತರಿದ್ದರು.

ಸಂಘಟಕರಾದ ತಾರಾನಾಥ ದೇವಾಡಿಗ ಮತ್ತು ಸತೀಶ್ ಪೂಜಾರಿ ಅಂಗರಗುಡ್ಡೆ ನಿರೂಪಿಸಿದರು. ಎಂಟು ಫ್ರಾಂಚೈಸಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

Edited By :
Kshetra Samachara

Kshetra Samachara

02/01/2022 09:08 pm

Cinque Terre

4.54 K

Cinque Terre

0

ಸಂಬಂಧಿತ ಸುದ್ದಿ