ಮಣಿಪಾಲ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರ ಸೈಕಲ್ ಸವಾರಿ ನೋಡಿ ಯುವಜನತೆ ನಿಬ್ಬೆರಗಾದರು.ಈ ಪ್ರಸಂಗ ನಡೆದದ್ದು , ಮಣಿಪಾಲದಲ್ಲಿ ನಡೆದ ಸೈಕಲ್ ಜಾಥಾದಲ್ಲಿ. "ಆರೋಗ್ಯಕ್ಕಾಗಿ ಸೈಕಲ್ ಜಾಥಾ" ಉದ್ಘಾಟಿಸಿದ ಶ್ರೀಗಳು ಖುದ್ದು ಸೈಕಲ್ ಸವಾರಿ ಮಾಡಿ ನೆರೆದ ಜನರನ್ನು ಚಕಿತಗೊಳಿಸಿದರು.
ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ, ವೈದ್ಯಕೀಯ ಪ್ರಕೋಷ್ಟ ಮತ್ತು ವಸಂತಿ ಎ. ಪೈ ಪ್ರತಿಷ್ಟಾನದ ವತಿಯಿಂದ ಸೈಕಲ್ ಜಾಥಾ ಆಯೋಜಿಸಲಾಗಿತ್ತು.
ಆರೋಗ್ಯಕ್ಕಾಗಿ ಸೈಕ್ಲಿಂಗ್ ಕ್ರಾಯಕ್ರಮದಲ್ಲಿ ಪಾಲ್ಗೊಂಡ ಶ್ರೀಗಳು ಸೈಕ್ಲಿಂಗ್ ಮೂಲಕ ಯುವಜನರಲ್ಲಿ ರೋಮಾಂಚನ ಮೂಡಿಸಿದರು.ವೃತ್ತಿಪರ ಸೈಕ್ಲಿಸ್ಟ್ ಗಳನ್ನೂ ನಾಚಿಸಿದ ಸ್ವಾಮೀಜಿ, ಸುಮಾರು 300 ಮೀಟರ್ ನಷ್ಟು ಲೀಲಾಜಾಲವಾಗಿ ಸವಾರಿ ಮಾಡಿದರು.
Kshetra Samachara
28/02/2022 12:32 pm