ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: "ಶಿಖರದಿಂದ ಸಾಗರದ ವರೆಗೆ..." ಯುವತಿಯರ ಸಾಹಸ ಯಾತ್ರೆಗೆ ಸ್ವಾಗತ

ಕಾಪು: ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ "ಶಿಖರದಿಂದ ಸಾಗರ" ಐತಿಹಾಸಿಕ ಯಾನದಲ್ಲಿ ಭಾಗಿಯಾಗಿರುವ ರಾಜ್ಯದ 5 ಮಂದಿ ಯುವತಿಯರನ್ನು ಕಾಪು ಲೈಟ್ ಹೌಸ್ ಬಳಿ ಸ್ವಾಗತಿಸಲಾಯಿತು.

ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಸ್ಥಳೀಯ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ಬರಮಾಡಿಕೊಳ್ಳಲಾಯಿತು.

ರಾಜ್ಯದ ವಿವಿಧೆಡೆಯ ಐದು ಮಂದಿ ಯುವತಿಯರು ಕಾಶ್ಮೀರದಲ್ಲಿ ಕೋಲ್‌ ಹೈ   ಶಿಖರವನ್ನು ಯಶಸ್ವಿಯಾಗಿ ಏರಿ, ಅನಂತರ ಲಡಾಖ್ ನಿಂದ 3000 ಕಿ.ಮೀ. ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿದ್ದು, ಕಾರವಾರದಿಂದ ಕರ್ನಾಟಕ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ. ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಿದ್ದಾರೆ.

ಮೈಸೂರಿನ ಬಿಂದು ಅವರ ನೇತೃತ್ವದಲ್ಲಿ ಶಿವಮೊಗ್ಗದ ಐಶ್ವರ್ಯ ಮತ್ತು ಧನಲಕ್ಷ್ಮೀ, ಬೆಂಗಳೂರಿನ ಆಶಾ, ಮಡಿಕೇರಿಯ ಪುಷ್ಪ ಅವರು ಶಿಖರದಿಂದ ಸಾಗರದ ವರೆಗಿನ ಯಾನ ಕೈಗೊಂಡಿದ್ದು, ಅವರು ತಮ್ಮ 75 ದಿನಗಳ ಯಾನದ ಅನುಭವ ಹಂಚಿಕೊಂಡರು. ಕಯಾಕಿಂಗ್ ಯಾನ ರವಿವಾರ ಮಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.

Edited By : Manjunath H D
Kshetra Samachara

Kshetra Samachara

30/10/2021 05:07 pm

Cinque Terre

12.63 K

Cinque Terre

0

ಸಂಬಂಧಿತ ಸುದ್ದಿ