ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾ.12ರಂದು ಕಟಪಾಡಿ ಕಂಬಳೋತ್ಸವ; 'ಪೂರ್ವಭಾವಿ ಕುದಿ ಕಂಬಳ'

ಕಟಪಾಡಿ: ಇತಿಹಾಸ ಪ್ರಸಿದ್ಧ ಉಡುಪಿ ಜಿಲ್ಲೆಯ ಕಟಪಾಡಿ ಜೋಡುಕರೆ ಕಂಬಳ ಮಾ. 12 ರಂದು ನಡೆಯಲಿದೆ. ದೇವರ ಕಂಬಳ ಎಂದೇ ಪ್ರಸಿದ್ಧಿ ಪಡೆದಿರುವ ಕಟಪಾಡಿ ಬೀಡಿನ ಜೋಡುಕರೆ ಕಂಬಳಕ್ಕೆ ಪೂರ್ವಭಾವಿಯಾಗಿ ಕುದಿ ಕಂಬಳ ನಡೆಯಿತು.

ಸಾಂಪ್ರದಾಯಿಕವಾಗಿ ನಡೆಯುವ ಈ ಕಂಬಳ ಗದ್ದೆಗೆ ಕೋಣಗಳನ್ನು ಇಳಿಸಲಾಯಿತು. ಇನ್ನು ಮಾ. 12ರ ವರೆಗೆ ಯಾವುದೇ ಕೋಣಗಳನ್ನು ಗದ್ದೆಗೆ ಇಳಿಸಲಾಗುವುದಿಲ್ಲ.

ಈ ಬಾರಿಯ ಕಟಪಾಡಿ ಕಂಬಳ ವಿಜೃಂಭಣೆಯಿಂದ ನಡೆಯಲಿದ್ದು, ಈಗಾಗಲೇ ಎಲ್ಲ ಸಿದ್ಧತೆ ಮಾಡಲಾಗಿದೆ. ವಾಹನ ನಿಲುಗಡೆ, ಕಂಬಳ ಗದ್ದೆ ತಯಾರಿ ಸಹಿತ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದ್ದು, ಸಾವಿರಾರು ಜನ ಸೇರುವ ನಿರೀಕ್ಷೆ ಇದೆ.

Edited By : Manjunath H D
Kshetra Samachara

Kshetra Samachara

10/03/2022 02:50 pm

Cinque Terre

4.44 K

Cinque Terre

1

ಸಂಬಂಧಿತ ಸುದ್ದಿ