ಕುಂದಾಪುರ: ಆಟಿ ಅಮಾವಾಸ್ಯೆ ಅಂಗವಾಗಿ ಇಲ್ಲಿನ ಕೋಟ ಪಡುಕರೆ, ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆ, ಕೋಡಿ ಕನ್ಯಾಣ, ತೆಕ್ಕಟ್ಟೆಯ ಕೊಮೆ ಕಡಲ ಕಿನಾರೆ ಸಹಿತ ಹಲವು ಕಡೆ ಸಾರ್ವಜನಿಕರು ಸಮುದ್ರ ಸ್ನಾನಗೈದರು.
ಕರ್ಕಾಟಕ ಅಮಾವಾಸ್ಯೆ ದಿನದಂದು ಸಮುದ್ರ ಸ್ನಾನಗೈಯ್ಯುವ ಸಂಪ್ರದಾಯ ಇದೆ. ಈ ದಿವಸ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದರೆ ಪಾಪಾದಿಗಳು ಶಮನಗೊಳ್ಳುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಕೋಟದ ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಸಾಲಿಗ್ರಾಮದ ಶ್ರೀ ಗುರುನರಸಿಂಹ ಆಂಜನೇಯ,ಕೋಡಿ, ಕೊಮೆ ಭಾಗಗಳಲ್ಲಿ ಶನೀಶ್ವರ ಹೀಗೆ ಸಾಕಷ್ಟು ದೇವಾಲಯಗಳಲ್ಲಿ ಭಕ್ತರ ಸಂದಣಿ ಇತ್ತು.
Kshetra Samachara
29/07/2022 12:26 pm