ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾರ್ಕೂರು: ರುದ್ರಭೂಮಿಯಲ್ಲಿ ಎದ್ದು ನಿಲ್ಲಲಿದೆ ಬೃಹತ್ ಶಿವನ ಪ್ರತಿಮೆ..

ಬಾರ್ಕೂರು: ಹನೆಹಳ್ಳಿ ಗ್ರಾಮ ಪಂಚಾಯತ್ ಬಳಿಯಿರುವ ಹಿಂದೂ ರುದ್ರಭೂಮಿಗೆ ಹೊಸ ಕಾಯಕಲ್ಪ ದೊರಕಲಿದೆ. ಸ್ಮಶಾನ ಅಂದರೆ ಭಯದ ವಾತಾವರಣ ದೂರಮಾಡಿ ಭಕ್ತಿಯು ಕೂಡ ಬರಬೇಕು ಎನ್ನುವ ದೃಷ್ಟಿಯಲ್ಲಿ ಹನೆಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಗಾಣಿಗ ಅವರ ನೇತೃತ್ವದಲ್ಲಿ ಅನಿಲ್ ಬೈಕಾಡಿ ಇವರ ಪ್ರಾಯೋಜಕತ್ವದಲ್ಲಿ ಬೃಹತ್ ಶಿವನ ಪ್ರತಿಮೆ ನೆಲೆಗೊಳ್ಳಲಿದೆ.

ವೇದಮೂರ್ತಿ ರಮೇಶ್ ಭಟ್ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶಿಲಾನ್ಯಾಸ ಮಾಡಿ ಧನಸಹಾಯವನ್ನು ಮಾಡಿ ಶುಭ ಹಾರೈಸಿದರು. ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ ,ನಮ್ಮ ಪಂಚಾಯತಿ ಸದಸ್ಯರು ಮಾಡುವ ಪ್ರತಿಯೊಂದು ಕೆಲಸಕ್ಕೂ ತನ್ನ ಸಂಪೂರ್ಣ ಬೆಂಬಲವಿದೆ. ಅಲ್ಲದೆ ಪಂಚಾಯತ್ ವತಿಯಿಂದ ನೀಡಬಹುದಾದ ಎಲ್ಲ ಸವಲತ್ತುಗಳನ್ನು ನೀಡಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು. ಸದಸ್ಯರಾದ ರಮಾನಂದ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ ಅವರು ಸ್ಮಶಾನದ ಪರಿಸರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದನ್ನು ಹಸಿರೀಕರಣಗೊಳಿಸಲು ತನ್ನಿಂದ ಸಾಧ್ಯವಾದಷ್ಟು ಸಹಾಯ ನೀಡುವುದಾಗಿ ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಂಧತಿ ಅವರು ಸರಕಾರದ ವತಿಯಿಂದ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯರಾದ ಚಂದ್ರ ಮರಕಾಲ,ಸುಜಾತ ಎಸ್ ಪೂಜಾರಿ, ಜ್ಯೋತಿ, ಪಂಚಾಯತ್ ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ , ಶಿಲ್ಪಿ ಪೂರ್ಣೇಶ್ ಅವರು ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಸುಧಾಕರ್ ರಾವ್ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.

Edited By : Manjunath H D
Kshetra Samachara

Kshetra Samachara

09/04/2022 09:14 pm

Cinque Terre

18.83 K

Cinque Terre

0

ಸಂಬಂಧಿತ ಸುದ್ದಿ