ಮಂಗಳೂರು: ಕರಾವಳಿಯ ಸುಪ್ರಸಿದ್ಧ ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆಯು ಫೆ.14ರಿಂದ ಆರಂಭವಾಗಿದ್ದು, ಇಂದು ಸಂಜೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆ ಬಲಿ, ಮಡಸ್ತಾನ, ಕಂಚಿಲ್ ಸೇವೆ, ಶ್ರೀ ದೇವಿಯ ಗರ್ಭಗುಡಿ ಪ್ರವೇಶ ಜರುಗಿತು.
ರಾತ್ರಿ 8 ಗಂಟೆಗೆ ಸುಡುಮದ್ದು ಪ್ರದರ್ಶನ ನಡೆಯಿತು. ರಾತ್ರಿ 11ರಿಂದ 1 ಗಂಟೆ ವರೆಗೆ ನೈವೇದ್ಯ ಬಲಿ, ಮಹಾರಾಶಿ ಪೂಜೆ ಜರುಗಲಿದೆ. ಮುಂಜಾವ 2.30ರಿಂದ 3.30ರ ವರೆಗೆ ಮಾರಿ ಉಚ್ಚಿಷ್ಟ, 4.30ಕ್ಕೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆಬಲಿ, ಮಡಸ್ತಾನ, ಶ್ರೀ ದೇವಿಯ ಗರ್ಭಗುಡಿ ಪ್ರವೇಶ, ರಥೋತ್ಸವ ಹಾಗೂ ತುಲಾಭಾರ ಸೇವೆ ನಡೆಯಲಿದೆ.
ಫೆ.11ರಂದು ಶ್ರೀ ಮಾರಿಯಮ್ಮ ಸನ್ನಿಧಾನದಲ್ಲಿ ಶ್ರೀ ಚಂಡಿಕಾ ಯಾಗ ಹಾಗೂ ಮಹಾ ಅನ್ನ ಸಂತರ್ಪಣೆ ನಡೆದಿದ್ದು, ಫೆ.19ರಂದು ಶ್ರೀ ಮಲರಾಯ- ಧೂಮಾವತಿ ದೈವಗಳ ನೇಮೋತ್ಸವ ಜರುಗಲಿದೆ.
Kshetra Samachara
15/02/2022 10:22 pm